

ಶ್ರೀನಗರ: ಕಾಶ್ಮೀರದ ಹಾಲಿ ಸಿಎಂ ಮುಫ್ತಿ ಮೊಹಮ್ಮದ್ ಸಯೀದ್ ಪುತ್ರಿ ರುಬಿಯಾಳ ಬಿಡುಗಡೆಗೆ-(1989) ಪ್ರತಿಯಾಗಿ ಉಗ್ರರನ್ನು ಬಂಧಮುಕ್ತಗೊಳಿಸುವ ಪ್ರಸ್ತಾಪಕ್ಕೂ ಆಗ ಮುಖ್ಯಮಂತ್ರಿಯಾಗಿದ್ದ ಫರೂಕ್ ಅಬ್ದುಲ್ಲಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಬಿಡುಗಡೆ ಮಾಡಬೇಕಾದ ಉಗ್ರರ ಸಂಖ್ಯೆ ಒಂದರಿಂದ ಐದು ಹೇಗಾಯ್ತು? ಅವರು ನನ್ನ ಮಗಳನ್ನೇ ಅಪಹರಿಸಿದ್ದರೂ ನಾನು ಯಾವುದೇ ಉಗ್ರರನ್ನು ಬಿಡುಗಡೆ ಮಾಡುತ್ತಿರಲಿಲ್ಲ ಎಂದು ರಾ ಅಧಿಕಾರಿಗಳಿಗೆ ತಿಳಿಸಿದ್ದರು. ನಂತರ ಐ.ಕೆ. ಗುಜ್ರಾಲ್, ಆರಿಫ್ ಮೊಹಮ್ಮದ್ ಖಾನ್ ಗುಪ್ತಚರದಳದ ಮುಖ್ಯಸ್ಥ ಎಂ.ಕೆ ನಾರಾಯಣನ್ ಜತೆಗೆ ಶ್ರೀನಗರಕ್ಕೆ ತೆರಳಿ ಅಬ್ದುಲ್ಲಾರನ್ನು ಒಪ್ಪಿಸಬೇಕಾಯಿತು ಎಂದು ದೌಲತ್ ಹೇಳಿದ್ದಾರೆ. ದೌಲತ್ ಅವರು 2000ದವರೆಗೆ ಗುಪ್ತಚರ ಸಂಸ್ಥೆ ``ರಾ''ದ ಮುಖ್ಯಸ್ಥರಾಗಿದ್ದರು. ನಂತರ ಅವರು ಕಾಶ್ಮೀರ ವಿಚಾರದಲ್ಲಿ ಪ್ರಧಾನಿ ಸಲಹೆಗಾರರಾಗಿದ್ದರು.
ಬಿಜೆಪಿ ಸರ್ಕಾರದ ಬಿಕ್ಕಟ್ಟು ನಿರ್ವಹಸುವಲ್ಲಿ ಹೇಗೆ ವಿಫಲವಾಯಿತು ಎನ್ನುವುದನ್ನು ದೌಲತ್ ಅವರು ವಿವರಿಸಿದ್ದಾರೆ. ಅಮೃತಸರದಲ್ಲಿದ್ದರೂ ಅಪಹರಣಕ್ಕೊಳಗಾದ ವಿಮಾನವನ್ನು ದೇಶದಿಂದ ಹೊರಹೋಗಲು ಅವಕಾಶ ನೀಡಲಾಯಿತು. ಇದರಿಂದಾಗಿಯೇ ಮೂರು ಪ್ರಮುಖ ಉಗ್ರರಾದ ಮೌಲಾನಾ ಮಸೂದ್ ಅಜರ್, ಅಹಮದ್ ಸಯೀದ್ ಶೇಖ್ ಮತ್ತು ಮುಷ್ತಾಖ್ ಅಹಮದ್ ಝರ್ಗಾರ್ ಬಿಡುಗಡೆ ಮಾಡಬೇಕಾಯಿತು.
-ಅಜಯ್ ಕುಮಾರ್, ಕಾಂಗ್ರೆಸ್ ಮುಖಂಡ
ಅಪಹರಣಕ್ಕೊಳಗಾಗಿದ್ದ ಏರ್ ಇಂಡಿಯಾ ವಿಮಾನದಲ್ಲಿದ್ದ ಭಾರತೀಯರಿಗೆ ಪ್ರತಿಯಾಗಿ ಮೂವರು ಉಗ್ರರನ್ನು ಬಿಡುಗಡೆ ಮಾಡುವ ನಿರ್ಧಾರವನ್ನು ಎಲ್ಲರ ಜತೆಗೆ ಚರ್ಚಿಸಿಯೇ ತೆಗೆದುಕೊಳ್ಳಲಾಗಿತ್ತು. ಅದೊಂದು ರಾಷ್ಟ್ರೀಯ ವಿಪತ್ತಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿ ವಾಜಪೇಯಿ ಸರ್ಕಾರ ಎಲ್ಲ ರಾಜಕೀಯ ಪಕ್ಷಗಳ ಅಭಿಪ್ರಾಯವನ್ನೂ ಪಡೆದಿತ್ತು.
-ಎಂ.ಜೆ. ಅಕ್ಬರ್, ಬಿಜೆಪಿ ವಕ್ತಾರ