ವ್ಯಾಪಂ ಹಗರಣ: ಮತ್ತೊಬ್ಬ ಪ್ರಮುಖ ಸಾಕ್ಷಿದಾರ ಸಾವು

ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ದಿನೇದಿನೇ ನಿಗೂಢ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಪ್ರಕರಣದ ಪ್ರಮುಖ ಸಾಕ್ಷಿದಾರನೊಬ್ಬ ನಿಗೂಢವಾಗಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಭೂಪಾಲ್: ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ದಿನೇದಿನೇ ನಿಗೂಢ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಪ್ರಕರಣದ ಪ್ರಮುಖ ಸಾಕ್ಷಿದಾರನೊಬ್ಬ ನಿಗೂಢವಾಗಿ  ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪೇದೆಗಳ ನೇಮಕಾತಿ ಹಗರಣದ ಸಾಕ್ಷಿದಾರ ಪೇದೆ ಸಂಜಯ್ ಯಾದವ್ ಅವರು ಎರಡು ತಿಂಗಳ ಹಿಂದೆಯೇ ನಿಗೂಢವಾಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಈತ ಮಧ್ಯಪ್ರದೇಶದ ವೃತ್ತಿಶಿಕ್ಷಣ ಪರೀಕ್ಷೆ ನೇಮಕಾತಿ ಹಗರಣದ ಪ್ರಮುಖ ಸಾಕ್ಷಿದಾರನಾಗಿದ್ದನು ಎಂದು ಹೇಳಲಾಗುತ್ತಿದೆ.
ಪ್ರಕರಣ ಸಂಬಂಧ ಸಂಜಯ್ ಯಾದವ್ ಗೆ ಎಸ್ ಟಿಎಫ್ ಸಮನ್ಸ್ ಜಾರಿ ಮಾಡಿತ್ತು. ಸಮನ್ಸ್ ಗೆ ಯಾವುದೇ ಉತ್ತರ ಬಾರದಿದ್ದಾಗ, ಆತ ನಿಗೂಢವಾಗಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಹಮೀರ್ ಪುರದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾನೆ ಎಂದು ನಿನ್ನೆ ಎಸ್ ಟಿಎಫ್ ಹೈಕೋರ್ಟ್ ಗೆ ವರದಿ ಸಲ್ಲಿಸಿದೆ.
ಸಂಜಯ್ ಯಾದವ್ ಅವರು ಮಧ್ಯಪ್ರದೇಶದ ರಾಜ್ಯಪಾಲ ರಾಮ್‌ ನರೇಶ್‌ ಯಾದವ್‌ ಹಾಗೂ ಮಾಜಿ ವಿಶೇಷ ಶಿಕ್ಷಣಾಧಿಕಾರಿ ಧನರಾಜ್ ಯಾದವ್ ಅವರಿಗೆ ಆಪ್ತನಾಗಿದ್ದನು ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com