ಖ್ಯಾತ ಸಂಗೀತ ನಿರ್ದೇಶಕ ಎಂ.ಎಸ್ ವಿಶ್ವನಾಥನ್ ವಿಧಿವಶ

ಕಳೆದ 2 ವಾರಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವಿಶ್ವನಾಥನ್ ಚಿಕಿತ್ಸೆ ಫಲಕಾರಿಯಾಗದೆ ಚೆನ್ನೈನ ಫೋರ್ಟಿಸ್‌ ಮಲಾರ್ ಖಾಸಗಿ...
ಸಂಗೀತ ನಿರ್ದೇಶಕ ಎಂಎಸ್ ವಿಶ್ವನಾಥನ್
ಸಂಗೀತ ನಿರ್ದೇಶಕ ಎಂಎಸ್ ವಿಶ್ವನಾಥನ್
Updated on: 

ಚೆನ್ನೈ: ದಕ್ಷಿಣ ಭಾರತ ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಎಂಎಸ್ ವಿಶ್ವನಾಥನ್ ಮಂಗಳವಾರ ಬೆಳಿಗ್ಗೆ ವಿಧಿವಶರಾಗಿದ್ದಾರೆ.
ಕಳೆದ 2 ವಾರಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವಿಶ್ವನಾಥನ್ ಚಿಕಿತ್ಸೆ ಫಲಕಾರಿಯಾಗದೆ ಚೆನ್ನೈನ ಫೋರ್ಟಿಸ್‌ ಮಲಾರ್ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಎರಡು ವಾರಗಳ ಹಿಂದೆ ಅಸ್ವಸ್ಥರಾದ ವಿಶ್ವನಾಥ್ ಅವರನ್ನು ಆಸ್ಪತ್ರಗೆ ದಾಖಲಿಸಲಾಗಿತ್ತು.
ವಿಶ್ವನಾಥನ್ ಅವರಿಗೆ 87 ವರ್ಷವಾಗಿತ್ತು. ಇವರು ಕನ್ನಡ, ತೆಲಗು, ತಮಿಳು, ಮಲಯಾಳಂ, ಹಿಂದಿ ಸೇರಿ ಹಲವು ಭಾಷೆಗಳ ಸುಮಾರು 1200ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನೀಡಿದ್ದರು,
ಕನ್ನಡದಲ್ಲಿ ಎರಡು ರೇಖೆಗಳು, ಬೆಂಕಿಯಲ್ಲಿ ಅರಳಿದ ಹೂವು, ತೆನಾಲಿ ರಾಮಕೃಷ್ಣ, ವಿಜಯನಗರದ ವೀರ ಪುತ್ರ, ಗಣೇಶನ ಮಹಿಮೆ, ಮಮತೆಯ ಮಡಿಲು, ಭಕ್ತ ಮಾರ್ಕಂಡೇಯ ಸೇರಿ ಹಲವು ಚಿತ್ರಗಳಿಗೆ ಸಂಗೀತ ನೀಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com