ಪ್ರಧಾನ ಸುದ್ದಿ

ಮಹಾರಾಷ್ಟ್ರದಲ್ಲಿ ನಾಗರಿಕರ ಗುಂಡಿನ ದಾಳಿಗೆ ಬಲಿಯಾದ ಸೇನಾ ಯೋಧ

ಉತ್ತರ ಮಹಾರಾಷ್ಟ್ರದ ಭುಸಾವಲ್ ನಲ್ಲಿ ಇಬ್ಬರು ಯುವಕರು ಸೇನಾ ಯೋಧನ ಸೇವಾ ಪಿಸ್ತೂಲನ್ನು ಕಸಿದು ಗುಂಡಿನ ದಾಳಿ ನಡೆಸಿದ್ದರಿಂದ ಯೋಧ ಮೃತಪಟ್ಟ ಘಟನೆ

ಮಹಾರಾಷ್ಟ್ರದಲ್ಲಿ ನಾಗರಿಕರ ಗುಂಡಿನ ದಾಳಿಗೆ ಬಲಿಯಾದ ಸೇನಾ ಯೋಧ
ಸಾಂದರ್ಭಿಕ ಚಿತ್ರ
Published On :

ಮುಂಬೈ: ಉತ್ತರ ಮಹಾರಾಷ್ಟ್ರದ ಭುಸಾವಲ್ ನಲ್ಲಿ ಇಬ್ಬರು ಯುವಕರು ಸೇನಾ ಯೋಧನ ಸೇವಾ ಪಿಸ್ತೂಲನ್ನು ಕಸಿದು ಗುಂಡಿನ ದಾಳಿ ನಡೆಸಿದ್ದರಿಂದ ಯೋಧ ಮೃತಪಟ್ಟ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ರಾತ್ರಿ ಜಲಗಾಂವ್ ಜಿಲ್ಲೆಯ ಭುಸಾವಲ್ ನ ಭಜರ್ಪೇಠ್ ನಲ್ಲಿ ಯೋಧರು ಮತ್ತು ಯುವಕರ ನಡುವೆ ನಡೆದ ಚಕಮಕಿಯಲ್ಲಿ ಈ ಘಟನೆ ಸಂಭವಿಸಿದೆ.

೨೦ರ ವಯಸ್ಸಿನ ಆಸುಪಾಸಿನಲ್ಲಿರುವ ಇಬ್ಬರು ಶಂಕಿತರನ್ನು ಬಂಧಿಸಿ ಐಪಿಸಿ ೩೦೨ರಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೋಲಿಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

೩೨ ವರ್ಷದ ಯೋಧ ಶೇಕ್ ಅಕ್ವಿಲ್ ಶೇಕ್ ರೆಹಮಾನ್ ಅವರು ಭುಸಾವಲ್ ನ ನಿವಾಸಿ. ಅವರು ಹತ್ತಿರದ ಪ್ರದೇಶದಲ್ಲಿ ಸುಳಿದಾಡುತ್ತಿರುವಾಗ ಇಬ್ಬರು ಯುವಕರ ಜೊತೆ ಜಗಳ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

"ಯೋಧ ಆಗ ತನ್ನ ಸೇವಾ ಪಿಸ್ತೂಲನ್ನು ಹೊರತೆಗೆದಿದ್ದಾನೆ ಅದನ್ನು ಕೂಡಲೆ ಕಸಿದ ಯುವಕರು ಗುಂಡು ಹಾರಿಸಿದ್ದಾರೆ. ಯೋಧನನ್ನು ಹತ್ತಿರದ ಜಲಗಾಂವ್ ನಾಗರಿಕ ಆಸ್ಪತ್ರೆಗೆ ಸೇರಿಸಿದ್ದರು, ಅವರು ಅಲ್ಲಿ ಮೃತಪಟ್ಟಿದ್ದಾನೆ" ಎಂದು ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.