

ಬೀಜಿಂಗ್: ದಕ್ಷಿಣ ಚೀನಾದ ಯಂಗೆಟ್ಜ್ ನದಿಯಲ್ಲಿ ಪ್ರಯಾಣಿಕ ಹಡಗೊಂದು ಮುಳುಗಿ ಸುಮಾರು 450 ಪ್ರಯಾಣಿಕರು ಕಾಣೆಯಾಗಿದ್ದಾರೆ ಎಂದು ತಿಳಿದುಬಂದಿದೆ.
"ಈಸ್ಟರ್ನ್ ಸ್ಟಾರ್" ಎಂಬ ಹೆಸರಿನ ಪ್ರಯಾಣಿಕ ಹಡಗು ಚೀನಾದ ನಾನ್ ಜಿಂಗ್ ನಿಂದ ಚಾಂಗ್ ಕಿಂಗ್ ನತ್ತ ಪ್ರಯಾಣ ಬೆಳೆಸಿತ್ತು. ಹಡಗಿನಲ್ಲಿ ಸಿಬ್ಬಂದಿಗಳು ಸೇರಿದಂತೆ ಸುಮಾರು 458 ಮಂದಿ ಪ್ರಯಾಣಿಕರು ಇದ್ದರು. ಯಂಗೆಟ್ಜ್ ನದಿಯಲ್ಲಿ ಉಂಟಾದ ಸುಂಟರಗಾಳಿಗೆ ಸಿಲುಕಿ ಜಿಲಾನಿ ಪ್ರದೇಶದಲ್ಲಿ ಹಡಗು ಮುಳುಗಿದೆ ಎಂದು ತಿಳಿದುಬಂದಿದೆ.