ನನ್ನದು ತಪ್ಪಾದರೆ ಕೃಷ್ಣ, ಎಚ್.ಡಿ,ಕುಮಾರಸ್ವಾಮಿದೂ ತಪ್ಪು: ಬಿ.ಎಸ್. ಯಡಿಯೂರಪ್ಪ

ಡಿನೋಟಿಫಿಕೇಶನ್ ವಿಚಾರದಲ್ಲಿ ಚಾರ್ಜ್ ಶೀಟ್ ಹಾಕುವ ಮೂಲಕ ತಮ್ಮನ್ನು ಕಟ್ಟಿ ಹಾಕಬೇಕಬೇಕು ಎಂದು ಕಾಂಗ್ರೆಸ್ ಸರ್ಕಾರ ಯೋಚಿಸುತ್ತಿದೆ. ಆದರೆ ಅದು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ...
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
Updated on: 

ಉಡುಪಿ:  ಡಿನೋಟಿಫಿಕೇಶನ್ ವಿಚಾರದಲ್ಲಿ ಚಾರ್ಜ್ ಶೀಟ್ ಹಾಕುವ ಮೂಲಕ ತಮ್ಮನ್ನು ಕಟ್ಟಿ ಹಾಕಬೇಕಬೇಕು ಎಂದು ಕಾಂಗ್ರೆಸ್ ಸರ್ಕಾರ ಯೋಚಿಸುತ್ತಿದೆ. ಆದರೆ ಅದು ಸಾಧ್ಯವಿಲ್ಲ
ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಈಗ 5 ಡಿನೋಟಿಫಿಕೇಶನ್ ಪ್ರಕರಣಗಳನ್ನು ದಾಖಲಿಸಿದೆ, ಇನ್ನೂ 10 ಪ್ರಕರಣಗಳನ್ನು ದಾಖಲಿಸಿಕೊಳ್ಳಲು ಸಿದ್ಧತೆ ಮಾಡಿಕೊಂಡಿರುವುದು ನನಗೆ ತಿಳಿದಿದೆ. ಆದರೆ ನಾನೇನೂ ತಪ್ಪು ಮಾಡಿಲ್ಲ, ನನಗೆ ನ್ಯಾಯಾಲಯದ ಮೇಲೆ ಪೂರ್ಣ ನಂಬಿಕೆ ಇದೆ. ಆದ್ದರಿಂದ ಸರ್ಕಾರದ ಈ ಕ್ರಮದ ಬಗ್ಗೆ ನಾನು ಕಾನೂನು ಹೋರಾಟ ಮಾಡುತ್ತೇನೆ ಎಂದವರು. `ನಾನು ಡಿನೋಟಿಫಿಕೇಶನ್ ಮಾಡಿದ್ದೇನೆ. ಅದು ಮುಖ್ಯಮಂತ್ರಿಗಿರುವ ಅಧಿಕಾರ. ಅದನ್ನು ಬಳಸಿಕೊಂಡಿದ್ದೇನೆ.

ಡಿನೋಟಿಫಿಕೇಶನ್ ಪ್ರಕ್ರಿಯೆಯಲ್ಲಿ ತಪ್ಪಾಗಿದ್ದರೆ ಮುಖ್ಯ ಕಾರ್ಯದರ್ಶಿ ಅವರಿಗೆ ತಡೆಯುವುದಕ್ಕೆ ಅಧಿಕಾರ ಇದೆ. ಆದರೆ ನಾನು ಮುಖ್ಯಮಂತ್ರಿಯಾಗಿರುವಾಗ ಮುಖ್ಯ ಕಾರ್ಯದರ್ಶಿಗಳು ತಡೆದಿರಲಿಲ್ಲ, ಆದ್ದರಿಂದ ನಾನು ತಪ್ಪು ಮಾಡಿಲ್ಲ. ಈ ಹಿಂದೆ ಎಸ್.ಎಂ. ಕಷ್ಣ, ಎಚ್.ಡಿ. ಕುಮಾರಸ್ವಾಮಿ ಕೂಡ ಡಿನೋಟಿಫಿಕೇಶನ್ ಮಾಡಿದ್ದಾರೆ. ನಾನು ಮಾಡಿದ್ದು ತಪ್ಪಾಗಿದ್ದರೆ ಇವರೆಲ್ಲರೂ ಮಾಡಿದ್ದು ತಪ್ಪು' ಎಂದು ತಮ್ಮ ವಾದವನ್ನು ಸಮರ್ಥಿಸಿಕೊಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com