ಸಾರ್ವಜನಿಕರಿಗೆ ತೊಂದರೆಯಾಗದಂತೆ ವಿಐಪಿಗಳು ಎಚ್ಚರ ವಹಿಸಬೇಕು: ಜೆಡಿಯು

ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವ ಗಣ್ಯರು ತಮ್ಮ ಓಡಾಟದಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು
ಶರದ್ ಯಾದವ್
ಶರದ್ ಯಾದವ್
Updated on: 

ನವದೆಹಲಿ: ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವ ಗಣ್ಯರು ತಮ್ಮ ಓಡಾಟದಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಜನಾತದಳ ಸಂಯುಕ್ತ ಪಕ್ಷದ ಅಧ್ಯಕ್ಷ ಶರದ್ ಯಾದವ್ ಮಂಗಳವಾರ ಹೇಳಿದ್ದಾರೆ.

ಹರ್ಯಾಣ ಮುಖ್ಯಮಂತ್ರಿಯವರ ರಕ್ಷಣಾ ದಳದ ಕಾರೊಂದು ಪಾದಚಾರಿಯ ಮೇಲೆ ಹರಿದ ನೆನ್ನೆಯ ಘಟನೆಗೆ ಶರದ್ ಯಾದವ್ ಪ್ರತಿಕ್ರಿಯಿಸುತ್ತಿದ್ದರು.

"ಅವರು ಪರಿಹಾರ ನೀಡುತ್ತಾರೆ. ಒಬ್ಬ ಸಾಮಾನ್ಯನ ಜೀವವನ್ನು ಇತ್ತೀಚಿಗೆ ಪರಿಹಾರ ಧನದಿಂದ ಬೆಲೆ ಕಟ್ಟಲಾಗುತ್ತಿದೆ. ಸಾಂವಿಧಾನಕ ಹುದ್ದೆ ಹೊಂದಿರುವವರು ಇಂತಹ ಜನರನ್ನು ರಕ್ಷಿಸಬೇಕು. ತಮ್ಮ ಓಡಾಟದಿಂದ ಸಾಮಾನ್ಯ ಜನಕ್ಕೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕು" ಎಂದಿದ್ದಾರೆ ಯಾದವ್.

ಈ ಮಧ್ಯೆ ಹರ್ಯಾಣ ಮುಖ್ಯಮಂತ್ರಿ ಖಟ್ಟರ್ ಈ ಘಟನೆಯ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಈ ಘಟನೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಹಾಗೂ ಚಾಲಕ ಕೂಡ ಗಾಯಗೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com