ಆಡಿಯೋ ಕ್ಲಿಪ್ ವಿವಾದ: ಅರವಿಂದ್ ಕೇಜ್ರಿವಾಲ್ ದೂಷಿಸಿದ ಕಾಂಗ್ರೆಸ್, ಬಿಜೆಪಿ; ಕ್ಷಮೆಯಾಚನೆಗೆ ಆಗ್ರಹ

ವಿಧಾನಸಭಾ ಚುನಾವಣೆಯನ್ನು ಎದುರಿಸಲು ಹಿಂಜರಿದು ಮತ್ತು ಸರ್ಕಾರ ರಚಿಸಲು ಆರು ಜನ ಕಾಂಗ್ರೆಸ್ ಶಾಸಕರನ್ನು ಕೊಳ್ಳಲು
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್
Updated on: 

ನವದೆಹಲಿ: ವಿಧಾನಸಭಾ ಚುನಾವಣೆಯನ್ನು ಎದುರಿಸಲು ಹಿಂಜರಿದು ಮತ್ತು ಸರ್ಕಾರ ರಚಿಸಲು ಆರು ಜನ ಕಾಂಗ್ರೆಸ್ ಶಾಸಕರನ್ನು ಕೊಳ್ಳಲು ಪ್ರಯತ್ನಿಸಿದ ಆರೋಪವನ್ನು ಮಾಜಿ ಆಪ್ ಶಾಸಕ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಹೊರಿಸಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ದೆಹಲಿ ಮುಖ್ಯಮಂತ್ರಿಯವರನ್ನು ತೀವ್ರವಾಗಿ ಟೀಕಿಸಿದ್ದು, ಕ್ಷಮೆಯಾಚಿಸಲು ಆಗ್ರಹಿಸಿದ್ದಾರೆ.

ಈ ಆರೋಪದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ದೆಹಲಿ ಕಾಂಗೆಸ್ ಅಧ್ಯಕ್ಷ ಅಜಯ್ ಮಾಕೆನ್, ಈ ವಿಷಯವನ್ನು ನಾನು ಚುನಾವಣಾ ಪ್ರಚಾರ ಸಮಯದಲ್ಲೇ ತಿಳಿಸಿದ್ದೆ ಆದರೆ ಇದು ಸುಳ್ಳಿನ ಕಂತೆ ಎಂದು ಕೇಜ್ರಿವಾಲ್ ಅಲ್ಲಗೆಳೆದಿದ್ದರು ಎಂದು ದೂಷಿಸಿದ್ದಾರೆ.

"ಇದು ನಿಜವಾಗಿಯೂ ಆಘಾತ. ಆಪ್ ಪಕ್ಷ ನಮ್ಮ ಶಾಸಕರನ್ನು ತನ್ನತ್ತ ಸೆಳೆಯಲು ಪ್ರಯತ್ನಿಸಿದ್ದರು. ಆಪ್ ಪಕ್ಷ ಅಧಿಕಾರ ಗಳಿಸಲು ಯಾವ ಹಂತಕ್ಕೆ ಬೇಕಾದರೂ ಹೋಗುತ್ತದೆ ಎಂಬುದು ಇದರಿಂದ ಸ್ಪಷ್ಟವಾಗಿ ತಿಳಿಯುತ್ತದೆ" ಎಂದಿದ್ದಾರೆ ಅವರು.

ಕೇಜ್ರಿವಾಲ್ ಮತ್ತು ಆಪ್ ನ ಮಾಜಿ ಶಾಸಕ ರೋಹಿಣಿ ರಾಜೇಶ್ ಗಾರ್ಗ್ ಅವರ ನಡುವೆ ನಡೆಯಿತು ಎಂಬ ಆಡಿಯೋ ಸಂಭಾಷಣೆಯ ಟೇಪ್ ಈ ವಿವಾದ ಎಬ್ಬಿಸಿದೆ. ಆ ಸಂಭಾಷಣೆಯಲ್ಲಿ ಕೇಜ್ರಿವಾಲ್ ಅಧಿಕಾರಕ್ಕೋಸ್ಕರ ಕಾಂಗ್ರೆಸ್ ಪಕ್ಷವನ್ನು ಒಡೆಯುವ ಚಿಂತನೆ ನಡೆಸಿದ್ದರು ಎನ್ನಲಾಗಿದೆ.

ಬಿಜೆಪಿ ಶಾಸಕಾಂಗ ಪಕ್ಷದ ಅಧ್ಯಕ್ಷ ವಿಜೇಂದರ್ ಗುಪ್ತಾ ಮಾತನಾಡಿ ಈ ಆಡಿಯೋ ಟೇಪ್ ನಿಂದ ಆಪ್ ಪಕ್ಷದ ಇಬ್ಬದಿ ನೀತಿ ಬಹಿರಂಗವಾಗಿದೆ ಎಂದಿದ್ದಾರೆ.

ದೆಹಲಿಯ ಜನಕ್ಕೆ ಮೋಸ ಮಾಡಿರುವುದರಿಂದ ಕೇಜ್ರಿವಾಲ್ ಅವರು ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com