ಎಬಿವಿಪಿ ಕಾರ್ಯಕರ್ತರಿಗೆ ಲಾಠಿಚಾರ್ಜ್; ಹಲವರಿಗೆ ಗಾಯ

ರಾಜ್ಯದಲ್ಲಿ ಹಾಳಾಗುತ್ತಿರುವ ಶಿಕ್ಷಣ ಪದ್ಧತಿಯನ್ನು ವಿರೋಧಿಸಿ ಪ್ರತಿಭಟನ ನಿರತ ಎಬಿವಿಪಿ ಕಾರ್ಯಕರ್ತರು ಬಿಹಾರ ವಿಧಾನಸಭೆಗೆ ಮುತ್ತಿಗೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಪಾಟ್ನಾ: ರಾಜ್ಯದಲ್ಲಿ ಹಾಳಾಗುತ್ತಿರುವ ಶಿಕ್ಷಣ ಪದ್ಧತಿಯನ್ನು ವಿರೋಧಿಸಿ ಪ್ರತಿಭಟನ ನಿರತ ಎಬಿವಿಪಿ ಕಾರ್ಯಕರ್ತರು ಬಿಹಾರ ವಿಧಾನಸಭೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದರಿಂದ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ನಂತರ ಲಾಠಿಚಾರ್ಜ್ ಮಾಡಿದ್ದಾರೆ.

ಪೊಲೀಸರ ಲಾಠಿಚಾರ್ಜ್ ಮತ್ತು ಪ್ರತಿಭಟನಕಾರರ ಕಲ್ಲೆಸೆತದ ಘರ್ಷಣೆಯಿಂದ ವಿಧಾನಸಭೆಯ ಆರ್-ಬ್ಲಾಕಿನ ಹತ್ತಿರ ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘರ್ಷಣೆಯ ಪ್ರದೇಶಕ್ಕೆ ಹೆಚ್ಚಿನ ಪೊಲೀಸ ಪಡೆಯೊಂದಿಗೆ ತೆರಳಿದ ಹಿರಿಯ ಪೋಲಿಸ್  ಸೂಪರ್ಇಂಟೆಂಡೆಂಟ್  ಜಿತೇಂದ್ರ ರಾಣ ಪರಿಸ್ಥಿತಿಯನ್ನು ಹದ್ದುಬಸ್ತಿಗೆ ತರಲು ಯಶಸ್ವಿಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com