

ವಾರಣಾಸಿ: ಎಎಪಿ ಸರ್ಕಾರ 'ರಾಜಕೀಯ ಅಪಕ್ವತೆ'ಗೆ ಬಲಿಯಾಗಿ ದೆಹಲಿ ಜನರ ಸೇವೆಗೆ ಸಿಕ್ಕ ಅವಕಾಶವನ್ನು ಕಳೆದುಕೊಳ್ಳಬಾರದು ಎಂದು ಕೇಂದ್ರ ವಿತ್ತ ಮಂತ್ರಿ ಅರುಣ್ ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ.
"ಹೆಚ್ಚಿನ ಭರವಸೆಯಿಂದ ಈ ಸರ್ಕಾರಕ್ಕೆ ಜನರು ಮತ ಹಾಕಿದರು. ಅವರು ತಮ್ಮ ಚುನಾಣಾ ವಚನಗಳನ್ನು ಪೂರೈಸುತ್ತಾರೆ ಎಂಬ ನಂಬಿಕೆ ಇಟ್ಟಿದ್ದರು. ರಾಜಕೀಯ ಅಪಕ್ವತೆಯಿಂದ ಈ ಅವಕಾಶವನ್ನು ಎಎಪಿ ಸರ್ಕಾರ ಕಳೆದುಕೊಳ್ಳಬಾರದು" ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರ ಮಾತುಕತೆಯನ್ನು ರೆಕಾರ್ಡ್ ಮಾಡಿದ್ದನ್ನು ಕೂಡ ಟೀಕಿಸಿದ ಜೇಟ್ಲಿ ಇದು ಹೊಸ ತರದ ರಾಜಕೀಯ ಎಂದಿದ್ದಾರೆ. "ಇಬ್ಬರು ರಾಜಕಾರಿಣಿಗಳ ಮಧ್ಯೆ ಮಾತುಕತೆಯನ್ನು ರೆಕಾರ್ಡ್ ಮಾಡಿಕೊಳ್ಳುವುದು ಹೊಸ ರೀತಿಯ ರಾಜಕೀಯ, ಇದು ಸರಿಯಲ್ಲ" ಎಂದಿದ್ದಾರೆ.
ಇಂದು ನಡೆದ ಎಎಪಿ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಭಿನ್ನಮತೀಯ ನಾಯಕರಾದ ಪ್ರಶಾಂತ್ ಭೂಷಣ್ ಮತ್ತು ಅರವಿಂದ್ ಕೇಜ್ರಿವಾಲ್ ಅವರನ್ನು ಉಚ್ಚಾಟಿಸಲಾಗಿದೆ.