ಬಾಂಬ್ ಬೆದರಿಕೆ: ಟರ್ಕಿಶ್ ಏರ್ಲೈನ್ಸ್ ಕ್ಯಾಸಬ್ಲಾಂಕಾದಲ್ಲಿ ಭೂಸ್ಪರ್ಶ

ಇಸ್ತಾನ್ಬುಲ್ ನಿಂದ ಬ್ರೆಜಿಲ್ ಗೆ ತೆರಳುತ್ತಿದ್ದ ಟರ್ಕಿಶ್ ಏರ್ಲೈನ್ಸ್ ಒಂದು ಬಾಂಬ್ ಬೆದರಿಕೆ ಬಂದ ಹಿನ್ನಲೆಯಲ್ಲಿ ಕ್ಯಾಸಬ್ಲಾಂಕಾದಲ್ಲಿ ಭೂಸ್ಪರ್ಶ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಇಸ್ತಾನ್ಬುಲ್: ಇಸ್ತಾನ್ಬುಲ್ ನಿಂದ ಬ್ರೆಜಿಲ್ ಗೆ ತೆರಳುತ್ತಿದ್ದ ಟರ್ಕಿಶ್ ಏರ್ಲೈನ್ಸ್ ಒಂದು ಬಾಂಬ್ ಬೆದರಿಕೆ ಬಂದ ಹಿನ್ನಲೆಯಲ್ಲಿ ಕ್ಯಾಸಬ್ಲಾಂಕಾದಲ್ಲಿ ಭೂಸ್ಪರ್ಶ ಮಾಡಿದೆ ಎಂದು ವಕ್ತಾರ ಇಂದು ತಿಳಿಸಿದ್ದಾರೆ.

೨೫೦ ಪ್ರಯಾಣಿಕರಿದ್ದ ಟಿಕೆ ೧೫ ವಿಮಾನ ಇಸ್ತಾನ್ಬುಲ್ ನಿಂದ ಬ್ರೆಜಿಲ್ ನ ಸಾಯೋ ಪಾಲೊ ಗೆ ಹೊರಟಿತ್ತು, ಆದರೆ ಬೆದರಿಕೆ ಕರೆಯ ನಂತರ ತುರ್ತು ಎಂದು ಪರಿಗಣಿಸಿ ಉತ್ತರ ಆಫ್ರಿಕಾ ನಗರದತ್ತ ತಿರುಗಿಸಲಾಯಿತು ಎಂದು ವಕ್ತಾರ ತಿಳಿಸಿದ್ದಾರೆ.

ಬೋಯಿಂಗ್ ೭೭೭ ವಿಮಾನ ಕ್ಯಾಸಬ್ಲಾಂಕಾದಲ್ಲಿ ಸುಮಾರು ೧೨:೩೬ (ಪ್ರಾದೇಶಿಕ ಸಮಯ)ಕ್ಕೆ ಇಳಿದಿದೆ ಎಂದಷ್ಟೇ ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com