ಪ್ರಧಾನ ಸುದ್ದಿ

ಅಸ್ಸಾಂನಲ್ಲಿ ಐಎಎಫ್ ಸುಖಾಯ್ ಎಸ್ ಯು-೩೦ ಯುದ್ಧ ವಿಮಾನ ಪತನ; ಚಾಲಕ ಸುರಕ್ಷಿತ

ಭಾರತೀಯ ಯುದ್ಧ ವಿಮಾನ ಐ ಎ ಎಫ್ ಸುಖಾಯ್ ಎಸ್ ಯು-30ಎಂಕೆಐ ಅಸ್ಸಾಮಿನ ನಗಾಂವ್ ಜಿಲ್ಲೆಯಲ್ಲಿ ಮಂಗಳವಾರ ಸುಮಾರು ೧೨:೩೦ಕ್ಕೆ ಪತನಗೊಂಡಿದೆ

ಅಸ್ಸಾಂನಲ್ಲಿ ಐಎಎಫ್ ಸುಖಾಯ್ ಎಸ್ ಯು-೩೦ ಯುದ್ಧ ವಿಮಾನ ಪತನ; ಚಾಲಕ ಸುರಕ್ಷಿತ
ಸಾಂದರ್ಭಿಕ ಚಿತ್ರ
Published On :

ಗೌಹಾಟಿ: ಭಾರತೀಯ ಯುದ್ಧ ವಿಮಾನ ಐ ಎ ಎಫ್  ಸುಖಾಯ್ ಎಸ್ ಯು-30ಎಂಕೆಐ ಅಸ್ಸಾಮಿನ ನಗಾಂವ್ ಜಿಲ್ಲೆಯಲ್ಲಿ ಮಂಗಳವಾರ ಸುಮಾರು ೧೨:೩೦ಕ್ಕೆ ಪತನಗೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಇಬ್ಬರೂ ವಿಮಾನ ಚಾಲಕರು ಸುರಕ್ಷಿತವಾಗಿದ್ದಾರೆ ಎಂದು ತಿಳಿಯಲಾಗಿದೆ.

ತೇಜಪುರ ವಿಮಾನಯಾನ ಅಡ್ಡೆಯಿಂದ ಈ ಯುದ್ಧವಿಮಾನ ಹೊರಟಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಯುದ್ಧವಿಮಾನ ಮೇಲಕ್ಕೆ ಹಾರಿದಾಕ್ಷಣ ತಾಂತ್ರಿಕ ತೊಂದರೆಗಳು ತಲೆದೋರಿದ್ದರಿಂದ ವಿಮಾನಚಾಲಕರು ವಿಮಾನವನ್ನು ತೊರೆಯಬೇಕಾಯಿತು. ಇಬ್ಬರೂ ವಿಮಾನಚಾಲಕರು ಸುರಕ್ಷಿತವಾಗಿದ್ದು, ವಿಮಾನ ತೇಜಪುರದ ದಟ್ಟ ಅರಣ್ಯದಲ್ಲಿ ಸ್ಪೋಟಗೊಂಡಿದೆ.

"ಈ ಅಪಘಾತಕ್ಕೆ ಕಾರಣ ತಿಳಿಯಲು ನ್ಯಾಯಾಲಯ ತನಿಖೆಯನ್ನು ಆದೇಶಿಸಲಾಗಿದೆ" ಎಂದು ತಂಡದ ಕ್ಯಾಪ್ಟನ್ ಮತ್ತು ರಕ್ಷಣಾ ಸಚಿವಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಹಾಜನ್ ಹೇಳಿಕೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.