ಲೈಂಗಿಕ ಜೀತಕ್ಕೋಸ್ಕರ ಇಸ್ಲಾಮಿಕ್ ಸ್ಟೇಟ್ ಸುಂದರ ಕನ್ಯೆಯರನ್ನು ಬಳಸುತ್ತಿದೆ: ವಿಶ್ವಸಂಸ್ಥೆ ತಜ್ಞ

ಹಲವಾರು ಹಳ್ಳಿಗಳ ಮೇಲೆ ದಾಳಿ ಮಾಡಿ ಯತೇಚ್ಛವಾಗಿ ಜನರನ್ನು ಕೊಂದ ಮೇಲೆ ಈಗ ಮಹಿಳೆಯರ ಗುಂಪಿನಲ್ಲಿ ಸುಂದರ ಕನ್ಯೆಯರನ್ನು ಆಯ್ಕೆ ಮಾಡಿ ಲೈಂಗಿಕ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಲಂಡನ್: ಹಲವಾರು ಹಳ್ಳಿಗಳ ಮೇಲೆ ದಾಳಿ ಮಾಡಿ ಯತೇಚ್ಛವಾಗಿ ಜನರನ್ನು ಕೊಂದ ಮೇಲೆ ಈಗ ಮಹಿಳೆಯರ ಗುಂಪಿನಲ್ಲಿ ಸುಂದರ ಕನ್ಯೆಯರನ್ನು ಆಯ್ಕೆ ಮಾಡಿ ಲೈಂಗಿಕ ಜೀತಕ್ಕೋಸ್ಕರ ತನ್ನ ಸಿರಿಯಾದ ಮೂಲ ಸ್ಥಾನಕ್ಕೆ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಕಳುಹಿಸುತ್ತಿದೆ ಎಂದು ವಿಶ್ವ ಸಂಸ್ಥೆಯ ತಜ್ಞರೊಬ್ಬರು ಹೇಳಿದ್ದಾರೆ.

ಲೈಂಗಿಕ ಅಪರಾಧಗಳ ಮೇಲೆ ವಿಶ್ವಸಂಸ್ಥೆಗೆ ವಿಶೇಷ ವರದಿಗಾರರಾಗಿರುವ ಜೈನಬ್ ಬಂಗೂರ ಮಹಿಳೆಯರನ್ನು ಸೆರೆ ಹಿಡಿದ ಮೇಲೆ ಅವರನ್ನು ನಗ್ನಗೊಳಿಸಿ ಅವರ ಮೇಲೆ ಕನ್ಯಾ ಪರೀಕ್ಷೆ ನಡೆಸಿ ನಂತರ ಜೀತ ಹರಾಜಿಗೆ ಕಳುಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ಜಿಹಾದಿಗಳನ್ನು ವಿರೋಧಿಸುತ್ತಿರುವ ಮಹಿಳೆಯರ ವಿರುದ್ಧದ ಅಪರಾಧಗಳ ಬಗ್ಗೆ ಹೆಚ್ಚಿನ ವರದಿಗಳು ಇನ್ನೂ ಲಭ್ಯವಾಗಿಲ್ಲ ಆದರೆ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ ಮಹಿಳೆಯನ್ನು ಸಜೀವವಾಗಿ ಸುಟ್ಟ ಘಟನೆ ತಿಳಿದು ಬಂದಿದೆ ಎಂದು ಬಂಗೂರ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com