ಮಾತುಕತೆ ನಡೆಯಬೇಕೆಂದರೆ 3 ಷರತ್ತು ಪಾಲಿಸಿ: ಪಾಕ್‍ಗೆ ಭಾರತ

`ಮತ್ತೆ ಎರಡೂ ರಾಷ್ಟ್ರಗಳೊಡನೆ ಮಾತುಕತೆ ಶುರುವಾಗಬೇಕೆಂದರೆ ನಮ್ಮ ಮೂರು ಷರತ್ತುಗಳಿಗೆ ನೀವು ಒಪ್ಪಬೇಕು''. ಇದು ಪಾಕಿಸ್ತಾನಕ್ಕೆ ಭಾರತ ಹಾಕಿರುವ ಸವಾಲು...
ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್
ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್
Updated on: 

ನವದೆಹಲಿ: `ಮತ್ತೆ ಎರಡೂ ರಾಷ್ಟ್ರಗಳೊಡನೆ ಮಾತುಕತೆ ಶುರುವಾಗಬೇಕೆಂದರೆ ನಮ್ಮ ಮೂರು ಷರತ್ತುಗಳಿಗೆ ನೀವು ಒಪ್ಪಬೇಕು''. ಇದು ಪಾಕಿಸ್ತಾನಕ್ಕೆ ಭಾರತ ಹಾಕಿರುವ ಸವಾಲು.

ಪಾಕಿಸ್ತಾನದ ಜತೆಗಿನ ಸಂಬಂಧದ ವಿಚಾರದಲ್ಲಿ ಸರ್ಕಾರಕ್ಕೆ ಯಾವುದೇ ಗೊಂದಲವಿಲ್ಲ. ನಮ್ಮಲ್ಲಿ ಪಾಕ್‍ಗೆ ಸಂಬಂಧಿಸಿ ಸ್ಪಷ್ಟವಾದ ನೀತಿಯಿದೆ ಎಂದಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, `ನಾವು ಪಾಕಿಸ್ತಾನದೊಂದಿಗೆ ಪ್ರತಿಯೊಂದು ವಿವಾದವನ್ನೂ ಶಾಂತಿಯುತವಾಗಿ ಬಗೆಹರಿಸಲು ಬಯಸುತ್ತೇವೆ. ಆದರೆ, ನಮ್ಮ ಮೂರು ಷರತ್ತುಗಳಿಗೆ ಪಾಕ್ ಒಪ್ಪಬೇಕು' ಎಂದಿದ್ದಾರೆ.

`ಮೊದಲನೆಯದಾಗಿ, ಮಾತುಕತೆಯು ಭಾರತ ಮತ್ತು ಪಾಕ್ ನಡುವೆ ಮಾತ್ರವೇ ನಡೆಯಬೇಕು. ಮೂರನೇ ರಾಷ್ಟ್ರದ ಹಸ್ತಕ್ಷೇಪ ನಡೆಯಬಾರದು. ಎರಡನೆಯದಾಗಿ, ಭಯೋತ್ಪಾದನೆ ಮತ್ತು ಹಿಂಸೆ ಮುಕ್ತ ವಾತಾವರಣವಿರಬೇಕು. ಮೂರನೆಯದಾಗಿ, ಮುಂಬೈ ದಾಳಿ ಸಂಚುಕೋರ ಝಕೀವುರ್ ರೆಹಮಾನ್ ಲಖ್ವಿ ಸೇರಿದಂತೆ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇವು ಇಂದಿನ ನಿರ್ಧಾರವಲ್ಲ, ಶಿಮ್ಲಾ ಮತ್ತು ಲಾಹೋರ್ ನಿರ್ಣಯದ ವೇಳೆಯೇ ಎರಡೂ ರಾಷ್ಟ್ರಗಳ ನಡುವೆ ಈ ಒಪ್ಪಂದ ನಡೆದಿತ್ತು' ಎಂದೂ ಹೇಳಿದ್ದಾರೆ ಸಚಿವೆ ಸುಷ್ಮಾ.

ಮೋದಿ ಇಸ್ರೇಲ್ ಪ್ರವಾಸ
ಪ್ರಧಾನಿ ನರೇಂದ್ರ ಮೋದಿ ಅವರು ಸದ್ಯದಲ್ಲೇ ಯಹೂದಿ ರಾಷ್ಟ್ರವಾದ ಇಸ್ರೇಲ್‍ಗೆ ಭೇಟಿ ನೀಡಲಿದ್ದಾರೆ. ಭಾರತದ ಪ್ರಧಾನಿಯೊಬ್ಬರು ಇಸ್ರೇಲ್ ಪ್ರವಾಸ ಮಾಡುತ್ತಿರುವುದು ಇದೇ ಮೊದಲು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮಾಹಿತಿ ನೀಡಿದ್ದಾರೆ. ಈವರೆಗೆ ಭಾರತದ ಒಬ್ಬರೇ ಒಬ್ಬರು ಪ್ರಧಾನಿಯಾಗಲೀ, ರಾಷ್ಟ್ರಪತಿಯಾಗಲೀ ಇಸ್ರೇಲ್‍ಗೆ ಭೇಟಿ ನೀಡಿಲ್ಲ. ಆದರೆ ಈಗ ಪ್ರಧಾನಿ ಮೋದಿ ಅವರು ಇಸ್ರೇಲ್ ಭೇಟಿಗೆ ಮುಂದಾಗಿದ್ದಾರೆ. ಆದರೆ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ ಎಂದು ಸುಷ್ಮಾ ತಿಳಿಸಿದ್ದಾರೆ.

ಪ್ರಧಾನಿಗೆ ಸಿಕ್ಕಿದ್ದು ರು.3.11 ಲಕ್ಷದ ಗಿಫ್ಟ್

ಅಧಿಕಾರ ಸ್ವೀಕರಿಸಿದಾಗಿನಿಂದ ಈವರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶ ಪ್ರವಾಸದ ವೇಳೆ ರು.3.11 ಲಕ್ಷ ಮೌಲ್ಯದ 65 ಉಡುಗೊರೆಗಳನ್ನು ಪಡೆದಿದ್ದಾರೆ. ಈ ಉಡುಗೊರೆಗಳ ಪೈಕಿ ಚಿನ್ನ ಮತ್ತು ವಜ್ರಖಚಿತ ಕಫ್ ಲಿಂಕ್, ಟೀ ಸೆಟ್‍ಗಳು, ಪುಸ್ತಕಗಳು, ಬುದ್ಧನ ಪ್ರತಿಮೆಗಳೂ ಸೇರಿವೆ. ಮಾಹಿತಿ ಹಕ್ಕು ಕಾಯ್ದೆಯನ್ವಯ ಸಲ್ಲಿಸಿದ್ದ ಅರ್ಜಿಗೆ ವಿದೇಶಾಂಗ ಸಚಿವಾಲಯ ಈ ಉತ್ತರ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com