ಪ್ರಧಾನ ಸುದ್ದಿ

ಮೋದಿ 'ಪಾತಕಿ' ಎಂದದ್ದಕ್ಕೆ ಅಜಂ ಖಾನ್ ವಿರುದ್ಧ ದೂರು

ವಿಶ್ವದ ಮೊದಲ ೧೦ ಪಾತಕಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಒಬ್ಬರು ಎಂದಿದ್ದ ಉತ್ತರಪ್ರದೇಶದ ಸಂಪುಟ ಸಚಿವ ಅಜಂ ಖಾನ್ ವಿರುದ್ಧ ಕಾನ್ಪುರ ನ್ಯಾಯಾಲಯದಲ್ಲಿ

ಮೋದಿ 'ಪಾತಕಿ' ಎಂದದ್ದಕ್ಕೆ ಅಜಂ ಖಾನ್ ವಿರುದ್ಧ ದೂರು
ಉತ್ತರಪ್ರದೇಶದ ಸಂಪುಟ ಸಚಿವ ಅಜಂ ಖಾನ್
Published On :

ಲಕನೌ: ವಿಶ್ವದ ಮೊದಲ ೧೦ ಪಾತಕಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಒಬ್ಬರು ಎಂದಿದ್ದ ಉತ್ತರಪ್ರದೇಶದ ಸಂಪುಟ ಸಚಿವ ಅಜಂ ಖಾನ್ ವಿರುದ್ಧ ಕಾನ್ಪುರ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ.

ಜಲ ನಿಗಮದ ನಿವೃತ್ತ ಎಂಜಿನಿಯರ್ ರಾಮ್ ಸೇವಕ್ ಶುಕ್ಲಾ ಅವರು ಈ ಆಪಾದನೆ ಮಾಡಿ ನಗರದ ಮೆಜೆಸ್ಟ್ರೆಟ್ ನ್ಯಾಯಾಲಯಕ್ಕೆ ಸಾಕ್ಷ್ಯ ಹೇಳಿದ್ದಾರೆ.

ಮೋದಿಯವರನ್ನು ಪಾತಕಿಯೆಂದು ಕರೆದು ಅಜಂ ಖಾನ್ ಸಾಂವಿಧಾನಕ ಹುದ್ದೆಗೆ ಅವಮಾನ ಮಾಡಿರುವುದಲ್ಲದೆ ಲಕ್ಷಾಂತರ ಜನರ ಭಾವನೆಯನ್ನು ಘಾಸಿಗೊಳಿಸಿದ್ದಾರೆ ಎಂದು ಶುಕ್ಲಾ ಆರೋಪಿಸಿದ್ದಾರೆ.

ಪ್ರಧಾನಿ ವಿಶ್ವ ದರ್ಜೆಯ ಪಾತಕಿ ಎಂದು ಜುಲೈ ೨೨ ನೆ ತಾರೀಕು ಎಂದು ಹೇಳಿದ್ದರು ಎಂದು ದೂರಿ ಅದಕ್ಕೆ ಪೂರಕವಾಗಿ ದಿನಪತ್ರಿಕೆಯಲ್ಲಿ ಪ್ರಕಟವಾಗಿದ್ದ ವರದಿಯ ತುಣುಕನ್ನೂ ಒದಗಿಸಿದ್ದಾರೆ.

ತಮ್ಮ ವಕೀಲರ ಮೂಲಕ ಸಚಿವರಿಗೆ ನೋಟಿಸ್ ಜಾರಿ ಮಾಡಿದ್ದರೂ ಅದಕ್ಕೆ ಅವರು ಪ್ರತಿಕ್ರಿಯಿಸಿಲ್ಲ ಎಂದು ಕೂಡ ದೂರಿದ್ದರೆ. ಮುಂದಿನ ವಿಚಾರಣೆ ನವೆಂಬರ್ ೧೭ಕ್ಕೆ ಮುಂದೂಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.