ನವದೆಹಲಿ: ವೇತನ, ಭತ್ಯೆ ಮತ್ತು ಪಿಂಚಣಿಯಲ್ಲಿ ಶೇ.23.55ರಷ್ಟು ಏರಿಕೆ, ಒಆರ್‍ಒಪಿ ಮಾದರಿಯಲ್ಲೇ ಸಮಾನ ಶ್ರೇಣಿಗೆ ಸಮಾನ ಪಿಂಚಣಿ ಯೋಜನೆ ಜಾರಿ...! ಇವು 7ನೇ ವೇತನ ಆಯೋಗದ ವರದಿಯಲ್ಲಿನ ಪ್ರಮುಖ ಅಂಶಗಳು.
ಮುಖ್ಯಾಂಶಗಳು
ವೇತನ, ಭತ್ಯೆ ಶೇ.23.55ರಷ್ಟು ಹೆಚ್ಚಳ
ಜ.1, 2016ರಿಂದ ಶಿಫಾರಸುಗಳ ಅನುಷ್ಠಾನ
ಕನಿಷ್ಠ ವೇತನ ರು.18 ಸಾವಿರ, ಗರಿಷ್ಠ ರು.2.25 ಲಕ್ಷ
ವಾರ್ಷಿಕ ವೇತನ ಹೆಚ್ಚಳ ಶೇ.3ರಲ್ಲೇ ಮುಂದುವರಿಕೆ
ಪಿಂಚಣಿಯಲ್ಲಿ ಶೇ.24ರಷ್ಟು ಹೆಚ್ಚಳ
ಯೋಧರಂತೆ ಕೇಂದ್ರ ಅಧಿಕಾರಿಗಳಿಗೂ ಒಆರ್‍ಒಪಿ ಮಾದರಿ ನೀತಿ ಪ್ರಸ್ತಾಪ
ಗ್ರ್ಯಾಚ್ಯುಟಿ ಮಿತಿ ರು.10 ಲಕ್ಷದಿಂದ ರು.20 ಲಕ್ಷಕ್ಕೆ ಏರಿಕೆ, ಡಿಎಯು ಶೇ.50ರಷ್ಟು ಹೆಚ್ಚಿದರೆ ಗ್ರಾಚ್ಯುಟಿ ಶೇ.25ರಷ್ಟು ಹೆಚ್ಚಿಸಲು ಪ್ರಸ್ತಾಪ
ಸದ್ಯ ಸಚಿವ ಸಂಪುಟ ಕಾರ್ಯದರ್ಶಿ ವೇತನ ರು.90 ಸಾವಿರ, ಇನ್ನು ರು.2.5ಲಕ್ಷ
ಎನ್‍ಪಿಎಸ್ ಕುಂದುಕೊರತೆಗಳ ಪರಿಹಾರಕ್ಕೆ ಒಂಬುಡ್ಸ್‍ಮನ್ ಸ್ಥಾಪನೆ
ಶಾರ್ಟ್ ಸರ್ವಿಸ್ ಕಮಿಷನ್ಡ್ ಆಫೀಸರ್ ಗಳಿಗಾಗಿ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಒಂದು ವರ್ಷದ ಎಕ್ಸಿಕ್ಯುಟಿವ್ ಅಥವಾ ಎಂಟೆಕ್ ಕಾರ್ಯಕ್ರಮ