ಹುಚ್ಚ ವೆಂಕಟ್‌ಗೆ ಡಿಸೆಂಬರ್ 4ರವರೆಗೆ ನ್ಯಾಯಾಂಗ ಬಂಧನ

ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ವಿರುದ್ಧ ವಿವಾದಿತ ಹೇಳಿಕೆ ಸಂಬಂಧ ಬಂಧನಕ್ಕೀಡಾಗಿರುವ ನಟ, ನಿರ್ದೇಶಕ ಹುಚ್ಚ ವೆಂಕಟ್ ಅವರನ್ನು ಇಂದು...
ಹುಚ್ಚ ವೆಂಕಟ್
ಹುಚ್ಚ ವೆಂಕಟ್
Updated on
ಬೆಂಗಳೂರು: ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ವಿರುದ್ಧ ವಿವಾದಾತ್ಮಕ ಹೇಳಿಕೆ ಸಂಬಂಧ ಬಂಧನಕ್ಕೀಡಾಗಿರುವ ನಟ, ನಿರ್ದೇಶಕ ಹುಚ್ಚ ವೆಂಕಟ್ ಅವರನ್ನು ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿದರು, ಈ ವೇಳೆ ವೆಂಕಟ್‌ಗೆ ಕೋರ್ಟ್ ಡಿ. 4ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಬೆಂಗಳೂರಿನ 17ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಇಂದು ಹುಚ್ಚ ವೆಂಟಕ್ ನನ್ನು ಪೊಲೀಸರು ಹಾಜರುಪಡಿಸಿದರು. ಈ ವೇಳೆ ವೆಂಕಟ್ ಪರ ವಾದಿಸಲು ವಕೀಲರು ಪೈಪೋಟಿ ನಡೆಸಿದರು. ವೆಂಕಟ್ ಪರ ಉಚಿತವಾಗಿ ವಕಾಲತ್ತು ವಹಿಸಲು ತಾ ಮುಂದು ನಾ ಮುಂದು ಎಂದು ಅರ್ಜಿ ಹಾಕಿದ್ದಾರೆ.
ತಮ್ಮ ವಿಚಿತ್ರ ಡೈಲಾಗ್ ಮ್ಯಾನರಿಜಂ ಮೂಲಕ ರಾಜ್ಯದ ಜನತೆಯ ಮನೆಮತಾಗಿರುವ ವೆಂಕಟ್ ಪ್ರಕರಣ ಸಂಬಂಧ ಕುತೂಹಲಕ್ಕಾಗಿ ಜನರು ನ್ಯಾಯಾಲಯದ ಸುತ್ತ ಕಿಕ್ಕಿರಿದು ನೆರೆದಿದ್ದಾರೆ.
ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸಹ ಸ್ಪರ್ಧಿ ರವಿ ಮುರೂರು ಮೇಲೆ ಹಲ್ಲೆ ನಡೆಸಿ ವಿವಾದಕ್ಕೆ ಕಾರಣವಾಗಿದ್ದ ಹುಚ್ಚ ವೆಂಕಟ್ ಅವರು ಅಂಬೇಡ್ಕರ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆ ಹಿನ್ನೆಲೆ ದಲಿತ ಸಂಘಟನೆಯ ಕಾರ್ಯಕರ್ತರು ವೆಂಕಟ್ ಮುಖಕ್ಕೆ ಮಸಿ ಬಳಿದಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com