ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮನೆ ಜಪ್ತಿ

ವಿತರಕರಿಗೆ ವಂಚಿಸಿದ ಆರೋಪ ಹಿನ್ನೆಲೆಯಲ್ಲಿ ಸಿಟಿ ಸಿವಿಲ್ ನ್ಯಾಯಾಲಯದ ಆದೇಶದ ಮೇರೆಗೆ ಚಿತ್ರ ನಿರ್ದೇಶಕ ಹಾಗೂ ಕರ್ನಾಟಕ ಚಲನಚಿತ್ರ...
ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು
ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು
Updated on: 

ಬೆಂಗಳೂರು: ವಿತರಕರಿಗೆ ವಂಚಿಸಿದ ಆರೋಪ ಹಿನ್ನೆಲೆಯಲ್ಲಿ ಸಿಟಿ ಸಿವಿಲ್ ನ್ಯಾಯಾಲಯದ  ಆದೇಶದ ಮೇರೆಗೆ ಚಿತ್ರ ನಿರ್ದೇಶಕ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ  ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರ ಮನೆಯನ್ನು ಜಪ್ತಿ ಮಾಡಲಾಗಿದೆ.

ನ್ಯಾಯಾಲಯದ ಸಿಬ್ಬಂದಿ ಶುಕ್ರವಾರ ಸಂಜಯನಗರದಲ್ಲಿರುವ ರಾಜೇಂದ್ರ ಸಿಂಗ್ ಬಾಬು  ಅವರ ಮನೆಗೆ ತೆರಳಿ ಜಪ್ತಿ ಮಾಡಿದರು. ಈ ವೇಳೆ ಅವರ ಪುತ್ರ ನಟ ಆದಿತ್ಯ ಅವರು ವಕೀಲರ ಜತೆ ಮಾತಿನ ಚಕಮಕಿ ನಡೆಸಿದರು. ನಂತರ ಮನೆಗೆ ಬೀಗ ಹಾಕಿಕೊಂಡು ಕಾರಿನಲ್ಲಿ  ತೆರಳಿದರು. ಹೀಗಾಗಿ ಸಿಬ್ಬಂದಿ ಜಪ್ತಿ ಕಾರ್ಯ ನಿಲ್ಲಿಸಿ ಈ ಬಗ್ಗೆ ನ್ಯಾಯಾಲಯಕ್ಕೆ ವರದಿ ನೀಡಿದರು. 

ಚೆಕ್‍ಬೌನ್ಸ್ ಪ್ರಕರಣ: 2012ರಲ್ಲಿ ರಾಜೇಂದ್ರ ಸಿಂಗ್ ಬಾಬು ಅವರು ತಮ್ಮ ಪುತ್ರ  ಆದಿತ್ಯ ನಾಯಕನಾಗಿ ನಟಿಸಿದ್ದ `ಮೋಹಿನಿ' ಚಿತ್ರ ವಿತರಣೆಗಾಗಿ ನವಶಕ್ತಿ ಎಂಟರ್‍ಪ್ರೈಸ್  ಮಾಲೀಕ ನಾಗರಾಜ್ ಅವರಿಂದ 6.28 ಲಕ್ಷ ರೂಪಾಯಿ ಮುಂಗಡ ಪಡೆದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com