ಜಾರ್ಜ್‍ಗೆ ಮಹಿಳಾ ಆಯೋಗದ ನೋಟಿಸ್

ಬೆಂಗಳೂರಿನಲ್ಲಿ ಕಾಲ್‍ಸೆಂಟರ್ ಉದ್ಯೋಗಿ ಮೇಲೆ ನಡೆದ ಅತ್ಯಾಚಾರ ಸಾಮೂಹಿಕವಲ್ಲ ಎಂದು ಹೇಳಿಕೆ ನೀಡಿದ್ದ ಗೃಹ ಸಚಿವ ಕೆ.ಜೆ.ಜಾರ್ಜ್‍ಗೆ...
ಲಲಿತಾ ಕುಮಾರಮಂಗಳಂ- ಕೆ.ಜೆ.ಜಾರ್ಜ್‍
ಲಲಿತಾ ಕುಮಾರಮಂಗಳಂ- ಕೆ.ಜೆ.ಜಾರ್ಜ್‍
Updated on: 

ನವದೆಹಲಿ: ಬೆಂಗಳೂರಿನಲ್ಲಿ ಕಾಲ್‍ಸೆಂಟರ್ ಉದ್ಯೋಗಿ ಮೇಲೆ ನಡೆದ ಅತ್ಯಾಚಾರ ಸಾಮೂಹಿಕವಲ್ಲ ಎಂದು ಹೇಳಿಕೆ ನೀಡಿದ್ದ ಗೃಹ ಸಚಿವ ಕೆ.ಜೆ.ಜಾರ್ಜ್‍ಗೆ ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದೆ. 

ಮಾಧ್ಯಮಗಳಲ್ಲಿ ಬಂದ ವರದಿ ಆಧರಿಸಿ ಸ್ವಯಂ ಪ್ರೇರಣೆಯಿಂದ ನೋಟೀಸ್ ಜಾರಿ ಮಾಡಿರುವುದಾಗಿ ಆಯೋಗದ ಅಧ್ಯಕ್ಷ ಲಲಿತಾ ಕುಮಾರಮಂಗಳಂ ತಿಳಿಸಿದ್ದಾರೆ. ``ಅತ್ಯಾಚಾರ ಎಂದರೇನು ಎಂಬುದು ಅವರಿಗೆ ಗೊತ್ತಿಲ್ಲ. ಹಾಗಾಗಿಯೇ ಲಘುವಾಗಿ ಮಾತನಾಡಿದ್ದಾರೆ.
ಸ್ವಯಂಪ್ರೇರಣೆಯಿಂ ದ ನೋಟಿಸ್ ಜಾರಿ ಮಾಡಿದ್ದೇವೆ. ಏನು ಉತ್ತರಿಸುತ್ತಾರೋ ನೋಡೋಣ'' ಎಂದು ಲಲಿತಾ ಕುಮಾರಮಂಗಳಂ ತಿಳಿಸಿದ್ದಾರೆ. ಕೆ.ಜೆ. ಜಾರ್ಜ್ ಅವರು ಇಬ್ಬರು ವ್ಯಕ್ತಿಗಳು ಮಾತ್ರ ಅಪರಾಧದಲ್ಲಿ ಭಾಗಿಯಾಗಿದ್ದರಿಂದ ಅದನ್ನು ಸಾಮೂಹಿಕ ಅತ್ಯಾಚಾರ ಎನ್ನಲಾಗದು, 3-4 ಜನರಿರಬೇಕು ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com