ಕೌಟುಂಬಿಕ ದೌರ್ಜನ್ಯ ಪ್ರಕರಣ: ದೆಹಲಿ ಶಾಸಕ ಸೋಮನಾಥ್ ಭಾರ್ತಿ ಬಂಧನ

ಕೌಟುಂಬಿಕ ದೌರ್ಜನ್ಯ ಪ್ರಕರಣ ಎದುರಿಸುತ್ತಿರುವ ದೆಹಲಿ ಮಾಜಿ ಸಚಿವ, ಶಾಸಕ ಸೋಮನಾಥ್ ಭಾರ್ತಿ ಅವರನ್ನು ದೆಹಲಿ ಪೊಲೀಸರು ಸೆ.29 ರಂದು ಬಂಧಿಸಿದ್ದಾರೆ.
ಸೋಮನಾಥ್ ಭಾರ್ತಿ
ಸೋಮನಾಥ್ ಭಾರ್ತಿ

ನವದೆಹಲಿ: ಕೌಟುಂಬಿಕ ದೌರ್ಜನ್ಯ ಪ್ರಕರಣ ಎದುರಿಸುತ್ತಿರುವ ದೆಹಲಿ ಮಾಜಿ ಸಚಿವ, ಶಾಸಕ ಸೋಮನಾಥ್ ಭಾರ್ತಿ ಅವರನ್ನು ದೆಹಲಿ ಪೊಲೀಸರು ಸೆ.29 ರಂದು ಬಂಧಿಸಿದ್ದಾರೆ.
ಬೆಳಿಗ್ಗೆ 4 ಗಂಟೆ ವೇಳೆಗೆ ಸೋಮನಾಥ್ ಭಾರ್ತಿ ಅವರನ್ನು ಬಂಧಿಸಲಾಗಿದೆ ಎಂದು ದೆಹಲಿ ಜಂಟಿ ಆಯುಕ್ತ ದೀಪೇಂದ್ರ ಪಾಠಕ್ ತಿಳಿಸಿದ್ದಾರೆ. ಕಳೆದ ಒಂದು ವಾರದಿಂದ ಸೋಮನಾಥ್ ಭಾರ್ತಿ ಬಂಧನದಿಂದ ತಪ್ಪಿಸಿಕೊಂಡಿದ್ದರು. ಸುಪ್ರೀಂ ಕೋರ್ಟ್ ನಿಂದ ನಿರೀಕ್ಷಣಾ ಜಾಮೀನು ನಿರಾಕರಣಎಯಾದ ಹಿನ್ನೆಲೆಯಲ್ಲಿ ಸೋಮನಾಥ್ ಭಾರ್ತಿ ಸೆ.28 ರಂದು ರಾತ್ರಿ ಪೊಲೀಸರೆದುರು ಶರಣಾಗಿದ್ದರು.
ಐಪಿಸಿ ಸೆಕ್ಷನ್ 307 (ಹತ್ಯೆ ಯತ್ನ) 420 (ವಂಚನೆ) 406 (ನಂಬಿಕೆ ಧ್ರೋಹ) 417 ,313 (ಮಹಿಳೆ ಮೇಲೆ ದೌರ್ಜನ್ಯ) ಸೇರಿದಂತೆ ಹಲವು ಸೆಕ್ಷನ್ ಗಳ ಅಡಿಯಲ್ಲಿ ಸೋಮನಾಥ್ ಭಾರ್ತಿ ಅವರನ್ನು ಬಂಧಿಸಲಾಗಿದೆ. ತನ್ನ ಪತಿ ಸೋಮನಾಥ್ ಭಾರ್ತಿ ತನ್ನ ಹಾಗೂ ತನ್ನ ಮಕ್ಕಳ ಮೇಲೆ ದೌರ್ಜನ್ಯವೆಸಗಿದ್ದರು ಎಂದು ಲಿಪಿಕಾ ಮಿತ್ರ ದೆಹಲಿ ಪೊಲೀಸರಿಗೆ ದೂರು ನೀಡಿದ್ದರು.
ದೆಹಲಿ ಪೊಲೀಸರೆದುರು ಶರಣಾದ ಬಗ್ಗೆ ಪ್ರತಿಕ್ರಿಯಿಸಿದ್ದ ಸೋಮನಾಥ್ ಭಾರ್ತಿ, ನಾನು ಬಂಧನದಿಂದ ತಪ್ಪಿಸಿಕೊಂಡಿರಲಿಲ್ಲ. ಕಾನೂನು ಸಹಾಯವನ್ನು ಪಡೆಯಲು ಯತ್ನಿಸಿದೆ. ಸುಪ್ರೀಂ ಕೋರ್ಟ್ ಶರಣಾಗಲು ಸೂಚಿಸಿರುವುದರಿಂದ ಪೊಲೀಸರೆದುರು ಶರಣಾಗಿದ್ದೇನೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com