ರಿಯಾದ್‌ನಲ್ಲಿ ಭಾರತ್ ಮಾತಾ ಕೀ ಜೈ ಘೋಷಣೆ ಕೂಗಿ ಮೋದಿಗೆ ಸ್ವಾಗತ

ಟಿಸಿಎಸ್ ಹಾಲ್‌ಗೆ ಮೋದಿ ಪ್ರವೇಶಿಸುತ್ತಿದ್ದಂತೆ ಅಲ್ಲಿನ ಉದ್ಯೋಗಿಗಳೆಲ್ಲಾ ಭಾರತ್ ಮಾತಾ ಕೀ ಜೈ ಎಂದು ಕೂಗಿ ಪ್ರಧಾನಿಯವರನ್ನು ಸ್ವಾಗತಿಸಿದ್ದಾರೆ...
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಆಲ್ ವುಮೆನ್ ಐಟಿ ಆ್ಯಂಡ್ ಐಟಿಇಎಸ್ ಸೆಂಟರ್‌ಗೆ ಭೇಟಿ ನೀಡಿದ ಮೋದಿ
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಆಲ್ ವುಮೆನ್ ಐಟಿ ಆ್ಯಂಡ್ ಐಟಿಇಎಸ್ ಸೆಂಟರ್‌ಗೆ ಭೇಟಿ ನೀಡಿದ ಮೋದಿ
Updated on
ರಿಯಾದ್: ಸೌದಿ ಅರೇಬಿಯಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಭಾನುವಾರ ಇಲ್ಲಿನ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಆಲ್ ವುಮೆನ್ ಐಟಿ ಆ್ಯಂಡ್ ಐಟಿಇಎಸ್ ಸೆಂಟರ್‌ಗೆ ಭೇಟಿ ನೀಡಿದ್ದಾರೆ. 
ಟಿಸಿಎಸ್ ಹಾಲ್‌ಗೆ ಮೋದಿ ಪ್ರವೇಶಿಸುತ್ತಿದ್ದಂತೆ ಅಲ್ಲಿನ ಉದ್ಯೋಗಿಗಳೆಲ್ಲಾ ಭಾರತ್ ಮಾತಾ ಕೀ ಜೈ ಎಂದು ಕೂಗಿ ಪ್ರಧಾನಿಯವರನ್ನು ಸ್ವಾಗತಿಸಿದ್ದಾರೆ.
ಟಿಸಿಎಸ್‌ನಲ್ಲಿ ಕಪ್ಪು ಬುರ್ಖಾ ಧರಿಸಿದ್ದ ಮಹಿಳಾ ಉದ್ಯೋಗಿಗಳು ಮೋದಿ ಜತೆ ಸೆಲ್ಫಿ ಕ್ಲಿಕ್ಕಿಸಲು ಮುಗಿಬೀಳುತ್ತಿದ್ದರು.
ಅಲ್ಲಿರುವ ಉದ್ಯೋಗಿಗಳನ್ನುದ್ದೇಶಿಸಿ ಮಾತನಾಡಿದ ಮೋದಿ ಸೌದಿ ಅರೇಬಿಯಾದ ಘನತೆಯಾಗಿರುವ ಉದ್ಯೋಗಿಗಳನ್ನು ನಾನಿಲ್ಲಿ ಭೇಟಿಯಾಗಿದ್ದೇವೆ. ಜಗತ್ತಿಗೆ ಪ್ರಬಲವಾದ ಉತ್ತರವನ್ನು ನೀಡಬಲ್ಲ ಸಾಮರ್ಥ್ಯವಿರುವವರ ಮುಂದೆ ನಾನು ನಿಂತಿದ್ದೇನೆ. ನೀವೆಲ್ಲರೂ ಭಾರತಕ್ಕೆ ಬರಲೇಬೇಕು, ನಿಮಗೆ ಅಲ್ಲಿ ಒಳ್ಳೆಯ ಸ್ವಾಗತ ಸಿಗುತ್ತದೆ ಎಂದು ಹೇಳಿದ್ದಾರೆ.
ಸೌದಿ ಅರೇಬಿಯಾಗೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಮೋದಿ, ಸೌದಿ ರಾಜ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್‌ರ ಮಗ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್‌ರನ್ನು ಭೇಟಿ ಮಾಡಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com