ನಿಷ್ಠೆ ಬದಲಿಸಿ ಪಕ್ಷಾಂತರ ಮಾಡುವವರನ್ನು ನಾನು ಯಾವತ್ತೂ ಬೆಂಬಲಿಸುವುದಿಲ್ಲ ಎಂದಿರುವ ಪವನ್ ಕಲ್ಯಾಣ್, ಬಹುಪಕ್ಷ ಪದ್ದತಿ ಪ್ರಜಾಪ್ರಭುತ್ವದ ಪ್ರಮುಖ ಅಂಗ. ಹೀಗಾಗಿಯೇ ನಾನು ಜನಸೇನಾ ರಾಜಕೀಯ ಪಕ್ಷವನ್ನು ಕಟ್ಟಿದ್ದೇನೆ. 2019ರ ಚುನಾವಣೆಯಲ್ಲಿ ನಮ್ಮ ಪಕ್ಷ ಸ್ಪರ್ಧಿಸಲಿದೆ. ಒಂದು ಪಕ್ಷದಿಂದ ಜನರ ಸಮಸ್ಯೆಗಳು ಪರಿಹಾರವಾಗದಿದ್ದರೆ ಮತ್ತೊಂದು ಪಕ್ಷ ಆ ಜನರ ಧ್ವನಿಯಾಗುತ್ತದೆ ಎಂದಿದ್ದಾರೆ.