ಸಮ ಬೆಸ ನಿಯಮ: ಕಾರು ಹಂಚಿಕೊಂಡು ಪ್ರಯಾಣಿಸಿದ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಸಾರಿಗೆ ಸಚಿವ ಗೋಪಾಲ್ ರೈ ಅವರ ಟಾಟ ನ್ಯಾನೋ ಕಾರಿನಲ್ಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಜೊತೆಗೆ ಪೂಲ್ ಮಾಡಿಕೊಂಡು

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಸಾರಿಗೆ ಸಚಿವ ಗೋಪಾಲ್ ರೈ ಅವರ ಟಾಟ ನ್ಯಾನೋ ಕಾರಿನಲ್ಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಜೊತೆಗೆ ಪೂಲ್ ಮಾಡಿಕೊಂಡು ದೆಹಲಿ ಸೆಕ್ರೆಟರಿಯೆಟ್ ಗೆ ಪ್ರಯಾಣಿಸಿದ್ದು ವಿಶೇಷವಾಗಿತ್ತು.
"ಸಮ-ಬೆಸ ನಿಯಮದ ಎರಡನೆ ಹಂತದಲ್ಲಿ ಸಾರ್ವಜನಿಕರಿಂದ ಸಂಪೂರ್ಣ ಬೆಂಬಲ ಪಡೆಯುತ್ತಿದ್ದೇವೆ ಮತ್ತು ಇದು ಮೊದಲ ಹಂತದಂತೆಯೇ ಯಶಸ್ವಿಯಾಗಲಿದೆ ಎಂದು ನಂಬಿದ್ದೇನೆ" ಎಂದು ಕೇಜ್ರಿವಾಲ್ ವರದಿಗಾರರಿಗೆ ತಿಳಿಸಿದ್ದಾರೆ.
ಇದಕ್ಕೂ ಮುಂಚಿತವಾಗಿ ದೆಹಲಿ ನೀರು ಸಚಿವ ಕಪಿಲ್ ಮಿಶ್ರಾ ತಮ್ಮ ಸಿವಿಲ್ ಲೇನ್ಸ್ ನಿವಾಸದಿಂದ ಸಭೆಗೆ ತೆರಳಲು ಮೆಟ್ರೊ ರೈಲು ಬಳಸಿ ಬಂದಿದ್ದರು.
೧೫ ದಿನಗಳ ಸಮ-ಬೆಸ ವಾಹನ ಚಾಲನೆ ನಿಯಮ ಏಪ್ರಿಲ್ ೧೫ ರಿಂದ ಜಾರಿಗೆ ಬಂದಿದ್ದು, ಬದಲಿ ದಿನಗಳಂದು ಸಮ ಬೆಸ ನೋಂದಣಿ ಸಂಖ್ಯೆಯ ವಾಹನಗಳಷ್ಟೇ ರಸ್ತೆಗಿಳಿಯುವ ಅವಕಾಶವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


