

ನವದೆಹಲಿ: ಭಾರತದ ಗಡಿ ಪ್ರವೇಶಿಸಿದ ಉಗ್ರರ ಬೆನ್ನಟ್ಟಿದ ಭಾರತೀಯ ಸೇನೆಯ ಯೋಧರು ಮಯನ್ಮಾರ್ ಗಡಿ ಪ್ರವೇಶಕ್ಕೆ ನುಗ್ಗಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದ್ದು, ನಾಗಾಲ್ಯಾಂಡ್‍ನ ಚೆನ್‍ಪೊಹೊ ಸಮೀಪದ ಅ೦ತಾರಾಷ್ಟ್ರೀಯ ಗಡಿಯಲ್ಲಿ ಈ ಘಟನೆ ಸಂಭವಿಸಿದೆ.
ನ್ಯಾಷನಲ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ (ಖಪ್ಲಾ೦ಗ್ ಬಣ)ನ ಬ೦ಡುಕೋರರನ್ನು ಭಾರತೀಯ ಸೇನೆಯ ಯೋಧರು ಕಳೆದ ಶುಕ್ರವಾರ ಬೆಳಗಿನ ಜಾವ ಸುಮಾರು 3 ಗ೦ಟೆ ವೇಳೆಗೆ ಬೆನ್ನತ್ತಿ ಗು೦ಡಿನ ಚಕಮಕಿ ನಡೆಸಿದ್ದಾರೆ ಎ೦ದು ಮೂಲಗಳು ತಿಳಿಸಿವೆ. ನಾಗಾಲೆ೦ಡ್‍ನ ಚೆನ್‍ಪೊಹೊ ಸಮೀಪದ ಅ೦ತಾರಾಷ್ಟ್ರೀಯ ಗಡಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದ್ದು, ಮ್ಯಾನ್ಮಾರ್ ಗಡಿಯಾಚೆಯಲ್ಲಿರುವ ಥೋಲೋ೯ಯ್ ಎ೦ಬ ಹಳ್ಳಿಗೂ ಭಾರತದ ಸುಮಾರು 30 ಸೈನಿಕರು ಹೋಗಿದ್ದರು ಎಂಬ ಮಾತುಗಳು ಕೇಳಿಬಂದಿವೆ.
ಈ ಹಿಂದೆ ಮಣಿಪುರದಲ್ಲಿ ಸೇನಾಯೋಧರ ಕ್ಯಾಂಪ್ ಗಳ ಮೇಲೆ ದಾಳಿ ನಡೆಸಿದ್ದ ಎನ್‍ಎಸ್‍ಸಿಎನ್-ಕೆ ಉಗ್ರರು ಸುಮಾರು 18 ಸೈನಿಕರನ್ನು ಹತ್ಯೆಗೈದಿದ್ದರು. ಈ ಘಟನೆ ಬಳಿಕ ಭಾರತೀಯ ಸೇನಾ ಯೋಧರು ಉಗ್ರರ ವಿರುದ್ಧ ವ್ಯಾಪಕ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ಯೋಧರು ಮಯನ್ಮಾರ್ ಗಡಿ ಪ್ರವೇಶಿಸಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಭಾರತೀಯ ಗಡಿಭಾಗದಲ್ಲಿ ನಾಗರಿಕರು ನೆಲೆಸಿದ್ದು, ಉಗ್ರರು ಪ್ರತಿದಾಳಿ ನಡೆದರೆ ಜೀವಹಾನಿ ಸ೦ಭವಿಸುವ ಸಾಧ್ಯತೆಯಿತ್ತು. ಆದರೆ ಅರಣ್ಯದಲ್ಲಿದ್ದ ಮ್ಯಾನ್ಮಾರ್ ಭದ್ರತಾ ಸಿಬ್ಬ೦ದಿ ಅವರನ್ನು ತಡೆದಿದ್ದರು. ಬಳಿಕ ಬೆಳಗ್ಗೆ 6ರ ತನಕ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಲಾಗಿತ್ತು ಎ೦ದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆ ವೇಳೆ ಯಾವುದೇ ಸಾವು-ನೋವು ಸ೦ಭವಿಸಿರುವ ಬಗ್ಗೆ ವರದಿಯಾಗಿಲ್ಲ.
ಆರೋಪ ನಿರಾಕರಿಸಿದ ಸೇನೆ
ಆದರೆ ಸೇನೆಯ ವಿರುದ್ಧದ ಆರೋಪವನ್ನು ಭಾರತೀಯ ಸೇನಾಧಿಕಾರಿಗಳು ತಿರಸ್ಕರಿಸಿದ್ದು, ಭಾರತೀಯ ಗಡಿಯಲ್ಲೇ ಕಾರ್ಯಾಚರಣೆ ನಡೆಸಲಾಗಿದೆಯ ಯೋಧರು ಮಯನ್ಮಾರ್ ಗಡಿ ಪ್ರವೇಶಿಸಿಲ್ಲ ಎಂದು ಹೇಳಿದ್ದಾರೆ. ಗಡಿಯಲ್ಲಿ ಗು೦ಡಿನ ಚಕಮಕಿ ನಡೆದ ಮಾಹಿತಿ ತಿಳಿಯುತ್ತಿದ್ದ೦ತೆಯೇ, ನಾಗಾಲ್ಯಾಂಡ್ ಪೊಲೀಸ್ ಅಧಿಕಾರಿಗಳ ತ೦ಡವು ಸ್ಥಳಕ್ಕೆ ತೆರಳಿ ಬಿಗಿ ಪೊಲೀಸ್ ಬ೦ದೋಬಸ್ತ್ ಕೈಗೊ೦ಡಿದೆ.
ಕಳೆದ ವರ್ಷವೂ ಉಗ್ರರ ವಿರುದ್ಧ ಕಾರ್ಯಾಚರಣೆ ಕೈಗೊಂಡಿದ್ದ ಭಾರತೀಯ ಸೇನೆ ಮಯನ್ಮಾರ್ ಗಡಿಯೊಳಕ್ಕೆ ನುಗ್ಗಿ ಅಲ್ಲಿದ್ದ ಎರಡು ಭಯೋತ್ಪಾದಕ ಕ್ಯಾ೦ಪ್‍ಗಳನ್ನು ನಾಶಗೊಳಿಸಿತ್ತು.