ಪ್ರಧಾನ ಸುದ್ದಿ

ಮಲಿವಾಲ್ ಬಂಧನಕ್ಕೆ ಮೋದಿ ಮತ್ತು ಜಂಗ್ ಹವಣಿಸುತ್ತಿದ್ದಾರೆ: ಕೇಜ್ರಿವಾಲ್

ಮಹಿಳೆಯರಿಗಾಗಿ ದೆಹಲಿ ಕಮಿಷನರ್ (ಡಿ ಸಿ ಡಬ್ಲ್ಯೂ) ಸ್ವಾತಿ ಮಲಿವಾಲ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಬಂಧಿಸಲು ಹವಣಿಸುತ್ತಿದ್ದಾರೆ

ಮಲಿವಾಲ್ ಬಂಧನಕ್ಕೆ ಮೋದಿ ಮತ್ತು ಜಂಗ್ ಹವಣಿಸುತ್ತಿದ್ದಾರೆ: ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
Published On :
ನವದೆಹಲಿ: ಮಹಿಳೆಯರಿಗಾಗಿ ದೆಹಲಿ ಕಮಿಷನರ್ (ಡಿ ಸಿ ಡಬ್ಲ್ಯೂ) ಸ್ವಾತಿ ಮಲಿವಾಲ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಬಂಧಿಸಲು ಹವಣಿಸುತ್ತಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಆರೋಪಿಸಿದ್ದಾರೆ. 
"ಮೂಲಗಳು- ಸ್ವಾತಿ ಮಲಿವಾಲ್ ಒಳ್ಳೆಯ ಕೆಲಸ ಮಾಡುತ್ತಿರುವುದಕ್ಕೆ ಅವರನ್ನು ತೆಗೆದುಹಾಕಲು ಎಲ್ ಜಿ ಮತ್ತು ಪ್ರಧಾನಿಮಂತ್ರಿ ಕಾರ್ಯಾಲಯ ತುದಿಗಾಲಲ್ಲಿ ನಿಂತಿವೆ. ಅವರನ್ನು ಮುಂದಿನ ವಾರಗಳಲ್ಲಿ ಬಂಧಿಸಿ ತೆಗೆದು ಹಾಕಲಿದ್ದಾರೆ" ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. 
ಮೊಹಲ್ಲಾ ಕ್ಲಿನಿಕ್ ಗಳನ್ನು ಸ್ಥಾಪಿಸಿದ ಹಾಗು ಮೇಲುಸೇತುವೆ ನಿರ್ಮಾಣದಲ್ಲಿ ಹಣ ಉಳಿಸಿದ ತಂಡವನ್ನು ವಜಾ ಮಾಡಲು ಎಲ್ ಜಿ ತುದಿಗಾಲಲ್ಲಿ ನಿಂತಿದ್ದಾರೆ ಎಂದು ಕೂಡ ಕೇಜ್ರಿವಾಲ್ ಮತ್ತೊಂದು ಟ್ವೀಟ್ ನಲ್ಲಿ ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷ ಮಾಡಿರುವ ತಪ್ಪುಗಳನ್ನು ಸರಿಪಡಿಸಲು ಪ್ರಯತ್ನಿಸುತ್ತಿರುವುದಾಗಿ ಜಂಗ್ ಹೇಳಿರುವ ಹಲವು ಪತ್ರಿಕಾ ವರದಿಗಳನ್ನು ಕೂಡ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. 
ಡಿಡಿಎ ಅಡಿ 10 ಆಸ್ಪತ್ರೆ ಸ್ಥಾಪಿಸಲು ಜಾಗ ಕೋರಿದ್ದು ತಪ್ಪೇ ಎಂದು ಪ್ರಶ್ನಿಸಿರುವ ಕೇಜ್ರಿವಾಲ್ ಈ ಪ್ರಸ್ತಾವನೆಯನ್ನು ಮೋದಿ ಮತ್ತು ಎಲ್ ಜಿ ತಿರಸ್ಕರಿಸಿರುವುದಾಗಿ ತಿಳಿಸಿದ್ದಾರೆ. 
"ಸಾರ್ವಜನಿಕರಿಗೆ ಸಹಾಯ ಮಾಡಿದ ಹಲವಾರು ಎಎಪಿ ನಿರ್ಣಗಳನ್ನು ಎಲ್ ಜಿ ಮೂಲಕ ನಿರಾಕರಿಸಲು ಮೋದಿ ನಿರ್ಧರಿಸಿದ್ದಾರೆ" ಎಂದು ಕೂಡ ಕೇಜ್ರಿವಾಲ್ ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.