ನವದೆಹಲಿ: ರಾಷ್ಟ್ರದ ರಾಜಧಾನಿಯ ಏಳು ಸಗಟು ಮಂಡಿಗಳಲ್ಲಿ ನಡೆದ ಎಪಿಎಂಸಿ ಚುನಾವಣೆಯ ೧೮ ಸ್ಥಾನಗಳಲ್ಲಿ ೧೪ ಸ್ಥಾನಗಳನ್ನು ಗೆದ್ದು ಆಮ್ ಆದ್ಮಿ ಪಕ್ಷ ಜಯಭೇರಿ ಭಾರಿಸಿದೆ. ಕೇಂದ್ರ ಸರ್ಕಾರದ ನೋಟು ಹಿಂಪಡೆತದ ವಿರುದ್ಧ ಜನರ ಆಕ್ರೋಶ ಇದು ಎಂದು ತಮ್ಮ ಗೆಲುವನ್ನು ಎಎಪಿ ಪಕ್ಷ ಬಣ್ಣಿಸಿದೆ.
ನವೆಂಬರ್ ೮ ರಂದು ೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂಪಡೆದ ನರೇಂದ್ರ ಮೋದಿ ಅವರ ನಿರ್ಧಾರದಿಂದ ಮೊದಲು ಏಟು ಬಿದ್ದದ್ದು ಮಂಡಿಗಳಿಗೆ.
ಇದು ಕೇಂದ್ರ ಸರ್ಕಾರದ ನೋಟು ಹಿಂಪಡೆತದ ವಿರುದ್ಧ ಜನರ ಆಕ್ರೋಶ ಎಂದು ದೆಹಲಿಯ ಕಾರ್ಮಿಕ ಸಚಿವ ಗೋಪಾಲ್ ರೈ ಹೇಳಿದ್ದರೆ, ಮುಂಬರುವ ಎಂಸಿಡಿ ಚುನಾವಣೆಗಳ ಸೆಮಿಫೈನಲ್ಸ್ ಎಪಿಎಂಸಿ ಚುನಾವಣೆ ಆಗಿತ್ತು ಎಂದು ಎಎಪಿ ದೆಹಲಿ ಘಟಕದ ಸಂಚಾಲಕ ದಿಲೀಪ್ ಪಾಂಡೆ ಹೇಳಿದ್ದಾರೆ.
೨೦೧೫ ರಲ್ಲಿ ಎಪಿಎಂಸಿ ಚುನಾವಣೆಗಳನ್ನು ಬಿಜೆಪಿ ಪಕ್ಷ ಗೆದ್ದಿತ್ತು.