ಇಸ್ಲಮಾಬಾದ್: ಭಾರತೀಯ ಸೇನಾಪಡೆ ನಡೆಸಿದ ಗುಂಡಿನ ದಾಳಿಗೆ ಓರ್ವ ನಾಗರಿಕ ಮೃತಪಟ್ಟಿದ್ದು, ನಾಲ್ವರು ಮಕ್ಕಳು ಗಾಯಗೊಂಡಿದ್ದಾರೆ ಎಂದು ಶುಕ್ರವಾರ ಆರೋಪಿಸಿರುವ ಪಾಕಿಸ್ತಾನ ಭಾರತದ ಉಪ ರಾಯಭಾರಿ ಜೆ ಪಿ ಸಿಂಗ್ ಅವರಿಗೆ ವಿವರಿಸಲು ಹೇಳಿದೆ.
ಪಾಕಿಸ್ತಾನದ ವಿದೇಶಾಂಗ ಕಚೇರಿ ರಾಯಭಾರಿಯ ಜೊತೆಗೆ ಆಕ್ರೋಶ ವ್ಯಕ್ತಪಡಿಸಿದೆ.
"ಕದನವಿರಾಮ ಉಲ್ಲಂಘಿಸಿ ಗಡಿ ನಿಯಂತ್ರಣ ರೇಖೆಯ ಬಳಿ ಶಾಲಾ ವಾಹನವನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನಾ ಪಡೆಗಳು ನಡೆಸಿರುವ ಅಪ್ರಚೋದಿತ ದಾಳಿಯನ್ನು ಪಾಕಿಸ್ತಾನ ಉಗ್ರವಾಗಿ ಖಂಡಿಸುತ್ತದೆ" ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
"ನಾಗರಿಕರು, ಗ್ರಾಮಸ್ಥರು, ನಾಗರಿಕ ಪ್ರಯಾಣ ಸೇವೆ ಮತ್ತು ಶಾಲಾ ವಾಹನವನ್ನು ಅಗತ್ಯವಾಗಿ ಗುರಿಯಾಗಿಸುವುದು ಖಂಡನೀಯ, ಮನುಷ್ಯನ ಘನತೆಗೆ ವಿರೋಧಿ ಮತ್ತು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಹಾಗು ಮಾನವೀಯ ಕಾನೂನನ್ನು ಉಲ್ಲಂಘಿಸಿದಂತೆ" ಎಂದು ಕೂಡ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನಾಕಿಯಲ್ ವಿಭಾಗದಲ್ಲಿ ಭಾರತದ ಪಡೆಗಳು ಗುಂಡು ಹಾರಿಸಿವೆ ಎಂದು ಆರೋಪಿಸಲಾಗಿದೆ.