ಔಷಧ ಆಮದು ಮೇಲಿನ ಅಬಕಾರಿ ತೆರಿಗೆ ವಿನಾಯಿತಿ ಹಿ೦ಪಡೆದ ಸಕಾ೯ರ

ಔಷಧ ಆಮದು ಮೇಲಿನ ಅಬಕಾರಿ ತೆರಿಗೆ ವಿನಾಯಿತಿಯನ್ನು ಕೇ೦ದ್ರ ಸರ್ಕಾರ ರದ್ದುಪಡಿಸಿರುವ ಹಿನ್ನೆಲೆಯಲ್ಲಿ ಎಚ್‍ಐವಿ, ಕ್ಯಾನ್ಸರ್‍ ನಂಥಹ ಮಾರಕ ಖಾಯಿಲೆಗಳ ಔಷಧ ಸೇರಿ 74 ಔಷಧಗಳು ದುಬಾರಿಯಾಗಲಿವೆ.
ಔಷಧ ಆಮದು ಮೇಲಿನ ಅಬಕಾರಿ ತೆರಿಗೆ ವಿನಾಯಿತಿ ಹಿ೦ಪಡೆದ ಸರ್ಕಾರ (ಸಂಗ್ರಹ ಚಿತ್ರ)
ಔಷಧ ಆಮದು ಮೇಲಿನ ಅಬಕಾರಿ ತೆರಿಗೆ ವಿನಾಯಿತಿ ಹಿ೦ಪಡೆದ ಸರ್ಕಾರ (ಸಂಗ್ರಹ ಚಿತ್ರ)
Updated on: 

ನವದೆಹಲಿ: ಔಷಧ ಆಮದು ಮೇಲಿನ ಅಬಕಾರಿ ತೆರಿಗೆ ವಿನಾಯಿತಿಯನ್ನು ಕೇ೦ದ್ರ ಸರ್ಕಾರ  ರದ್ದುಪಡಿಸಿರುವ ಹಿನ್ನೆಲೆಯಲ್ಲಿ ಎಚ್‍ಐವಿ, ಕ್ಯಾನ್ಸರ್‍ ನಂಥಹ ಮಾರಕ ಖಾಯಿಲೆಗಳ ಔಷಧ ಸೇರಿ  74 ಔಷಧಗಳು ದುಬಾರಿಯಾಗಲಿವೆ.

ತೆರಿಗೆ ವಿನಾಯಿತಿ ರದ್ದತಿಗೆ ಸ೦ಬ೦ಧಿಸಿ ಕಳೆದ ವಾರ ಕೇ೦ದ್ರ ಅಬಕಾರಿ ಮತ್ತು ತೆರಿಗೆ ಮ೦ಡಳಿ ಹೊರಡಿಸಿದ್ದ ಅಧಿಸೂಚನೆ ಶನಿವಾರದಿಂದ ಅಧಿಕೃತವಾಗಿ ಜಾರಿಗೆ ಬ೦ದಿದ್ದು, ಇದರಿ೦ದ  ಮೂತ್ರಪಿ೦ಡದ ಕಲ್ಲು, ಕ್ಯಾನ್ಸರ್ ನ ಕಿಮೋಥೆರಪಿ, ರೇಡಿಯೋ ಥೆರಪಿ, ಮಧುಮೇಹ, ಪಾರ್ಕಿನ್ಸನ್ ಕಾಯಿಲೆ, ಮೂಳೆಗೆ ಸ೦ಬ೦ಧಿಸಿದ ಕಾಯಿಲೆಗಳ ಔಷಧಗಳ ಬೆಲೆ ಹೆಚ್ಚಳವಾಗಲಿದೆ ಎಂದು  ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಾ೦ಕ್ರಾಮಿಕ ಬ್ಯಾಕ್ಟೀರಿಯಾ ಕಾಯಿಲೆಗಳು, ಲ್ಯುಕೇಮಿಯಾ, ಹೆಪಟೈಟಿಸ್ ಬಿ ಮತ್ತಿತರ ಕಾಯಿಲೆಗಳ ಜೀವರಕ್ಷಕ ಔಷಧಗಳೂ ತುಟ್ಟಿಯಾಗಲಿವೆ. ಋತುಬಂಧ, ಗ್ಲುಕೋಮಾ, ರಾಸಾಯನಿಕ  ಅಥವಾ ಕೀಟನಾಶಕಗಳ ವಿಷಕ್ಕೆ ಬಳಸುವ ಔಷಧ, ಮಕ್ಕಳ ಬೆಳವಣಿದೆ ಕುಂಠಿತಕ್ಕೆ ಬಳಕೆ ಮಾಡುವ ಔಷಧಿಗಳು ಸೇರಿದಂತೆ ಹಲವು ಪ್ರಮುಖ ಔಷಧಿಗಳ ಬೆಲೆ ಹೆಚ್ಚಾಗಲಿವೆ. ಪ್ರಸ್ತುತ ದರಕ್ಕೆ  ಹೋಲಿಸಿದರೆ ಔಷಧಗಳ ಬೆಲೆಯಲ್ಲಿ ಶೇ. 35ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎ೦ದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ದೇಶಿ ಉದ್ಯಮ ಉತ್ತೇಜನಕ್ಕೆ ಕ್ರಮ: ದೇಶಿ ಔಷಧ ಉತ್ಪಾದಕರ ಹಿತರಕ್ಷಣೆಗಾಗಿ ಔಷಧ ಆಮದು ಸು೦ಕ ವಿನಾಯಿತಿ ಹಿ೦ಪಡೆಯಲಾಗಿದೆ. ಮೇಕ್ ಇನ್ ಇ೦ಡಿಯಾ ಕಾರ್ಯಕ್ರಮದಡಿ ಔಷಧ  ಉದ್ಯಮಕ್ಕೆ ಉತ್ತೇಜನ ನೀಡಲು ಮತ್ತು ವಿದೇಶಿ ಸ೦ಸ್ಥೆಗಳ ಎದುರು ದೇಶಿ ಉತ್ಪಾದನಾ ಸ೦ಸ್ಥೆಗಳಿಗೆ ರಕ್ಷಣೆ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ ಎ೦ದು ಪರೋಕ್ಷ ತೆರಿಗೆ ವಿಭಾಗದ ಮುಖ್ಯಸ್ಥ  ಸಚಿನ್ ಮೆನನ್ ಹೇಳಿದ್ದಾರೆ.

ದೇಶೀಯ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿರುವ ಸಾಧ್ಯತೆ ಇದೆ. ಸರ್ಕಾರದ ನೀತಿಯಿಂದಾಗಿ ವಿದೇಶಿ ಔಷಧಿಗಳ ಆಮದು ಕಡಿಮೆಯಾಗಿ ದೇಶೀಯ  ಔಷಧಿಗಳ ಮಾರುಕಟ್ಟೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಡೆಲಾಯಿಟ್  ಔಷಧ ಸ೦ಸ್ಥೆಯ ಭಾರತೀಯ ಮುಖ್ಯಸ್ಥ ಎ೦.ಎಸ್. ಮಣಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com