ಕೆಲವು ದಿನಗಳ ಹಿಂದೆ ನಾನು ಲಂಡನ್‌ಗೆ ಹೋಗಿದ್ದೆ. ಅಲ್ಲಿ ಮಹಾತ್ಮ ಬಸವೇಶ್ವರರ ಪ್ರತಿಮೆ ಅನಾವರಣ ಮಾಡಿದೆ. ಸಮಾನತೆ, ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣ. ಬಸವಣ್ಣನವರ ವಿಚಾರಧಾರೆ ಇಡೀ ವಿಶ್ವಕ್ಕೆ ಮಾದರಿ. ಅಂತಹ ಅಪೂರ್ವ ಸಾಧಕರು ಹುಟ್ಟಿದ ನೆಲದಲ್ಲಿ ನಾನಿದ್ದೇನೆ. ಇಂದು ಅದೇ ಪರಂಪರೆಯ ಗಣ್ಯರೊಂದಿಗೆ ನಾನಿದ್ದೇನೆ. ಇಂತಹ ಅಪೂರ್ವ ಸಂದರ್ಭ ನನಗೆ ಮತ್ತೆಲ್ಲಿ ಸಿಗುತ್ತದೆ ಎಂದರು.