ಸಿದ್ಧಗಂಗಾ ಶ್ರೀ ಸೌಖ್ಯ: ಕಿರಿಯ ಶ್ರೀ ಸ್ಪಷ್ಟನೆ

ಸಿದ್ಧಗಂಗೆಯ ಡಾ. ಶಿವಕುಮಾರ ಸ್ವಾಮೀಜಿ ಎಂದಿನಂತೆ ಆರೋಗ್ಯವಾಗಿದ್ದು, ಶ್ರೀಮಠದ ಕೆಲಸ, ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆಂದು ಸಿದ್ಧಗಂಗಾ ಮಠದ ಕಿರಿಯ ಶ್ರೀ...
ಸಿದ್ಧಗಂಗಾ ಶ್ರೀ
ಸಿದ್ಧಗಂಗಾ ಶ್ರೀ

ತುಮಕೂರು: ಸಿದ್ಧಗಂಗೆಯ ಡಾ. ಶಿವಕುಮಾರ ಸ್ವಾಮೀಜಿ ಎಂದಿನಂತೆ ಆರೋಗ್ಯವಾಗಿದ್ದು, ಶ್ರೀಮಠದ ಕೆಲಸ, ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆಂದು ಸಿದ್ಧಗಂಗಾ ಮಠದ ಕಿರಿಯ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ. ಶ್ರೀಗಳ ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡಿರುವ ಸಿದ್ಧಲಿಂಗ ಸ್ವಾಮೀಜಿ, ಶ್ರೀಗಳ ಆರೋಗ್ಯದಲ್ಲಿ ಯಾವುದೇ ವ್ಯತ್ಯಯ ಆಗಿಲ್ಲ. ಯಾರೋ ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಶ್ರೀಗಳ ಆರೋಗ್ಯದ ಬಗ್ಗೆ ಎದ್ದಿರುವ ವದಂತಿಗೆ ಭಕ್ತರು ತಲೆಕೆಡಿಸಿಕೊಂಡು ಆತಂಕಕ್ಕೀಡಾಗುವುದು ಬೇಡ. ಶ್ರೀಗಳು ಎಂದಿನಂತೆ ಶನಿವಾರ ಸಹ ಬೆಳಗಿನ ಜಾವ 3 ಗಂಟೆಗೆ ಎದ್ದು ಸ್ನಾನ ಮುಗಿಸಿ ಮುಂಜಾನೆ 5 ಗಂಟೆಯವರೆಗೆ ಶಿವಪೂಜೆಯಲ್ಲಿ ತೊಡಗಿದ್ದರು. ಬಳಿಕ 6 ಗಂಟೆಯವರೆಗೆ ವಿಶ್ರಾಂತಿಗೆ ತೆರಳಿದ್ದರು. ತದನಂತರ 6 ರಿಂದ 7 ಗಂಟೆಯವರೆಗೆ ಭಕ್ತರಿಗೆ ದರ್ಶನ ನೀಡಿ 9 ಗಂಟೆಯವರೆಗೆ ವಿಶ್ರಾಂತಿಯಲ್ಲಿದ್ದರು. 9ರಿಂದ 12 ಗಂಟೆಯವರೆಗೆ ಪಾದಪೂಜೆಯಲ್ಲಿ ಭಾಗಿಯಾಗಿದ್ದರು. 1 ರಿಂದ 2 ಗಂಟೆಯವರೆಗೆ ಮತ್ತೆ ಶಿವಪೂಜೆಯಲ್ಲಿ ತೊಡಗಿದ್ದರು. ಸಂಜೆ 5 ಗಂಟೆಗೆ ವಿದ್ಯಾರ್ಥಿಗಳ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದರು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com