

ರಿಯೋ ಡಿ ಜನೈರೋ: ಬ್ರೆಜಿಲ್ ನ ರಿಯೋ ಡಿ ಜನೈರೋದಲ್ಲಿ ಮುಂದಿನ ಆಗಸ್ಟ್ ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಮೇಲೆ ಇದೀಗ ಝಿಕಾ ಕರಿನೆರಳು ಆವರಿಸಿದೆ.
ಅತ್ಯಂತ ವೇಗವಾಗಿ ವಿಶ್ವವ್ಯಾಪಿ ಹರಡುತ್ತಿರುವ ಝಿಕಾ ವೈರಾಣು ರೋಗ ಮುಂದಿನ 6 ತಿಂಗಳಲ್ಲಿ ರೋಗ ನಿಯಂತ್ರಣಕ್ಕೆ ಬಾರದೇ ಇದ್ದಲ್ಲಿ ವಿಶ್ವ ಮೇಳವೇ ರದ್ದಾಗುವ ಆತಂಕ ಎದುರಾಗಿದೆ. ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ಬ್ರೆಜಿಲ್ ನತ್ತ ಪ್ರಯಾಣ ಮಾಡದಂತೆ ನಾಗರಿಕರಿಗೆ ಸೂಚಿಸಿವೆ. ರಷ್ಯಾ, ಆಸ್ಟ್ರೇಲಿಯಾ ಸೇರಿದಂತೆ ಕೆಲವು ರಾಷ್ಟ್ರಗಳಂತೂ ಒಲಿಂಪಿಕ್ಸ್ ಆಟಗಾರರು ಮತ್ತು ಪ್ರೇಕ್ಷಕರಿಗೂ ಅಲ್ಲಿಗೆ ತೆರಳುವ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚಿಸಿವೆ.
ಈ ದೇಶಗಳಿಗೆ ಹೋಗುವ ಮುನ್ನು ಮುನ್ನೆಚ್ಚರಿಕೆ ಇರಲಿ
14 ಮಧ್-ದಕ್ಷಿಣ ಅಮೆರಿಕಾ ರಾಷ್ಟ್ರಗಳು, ಬ್ರೆಜಿಲ್, ಕೊಲಂಬಿಯಾ, ಎಲ್ ಸಲ್ವಡಾರ್, ಫ್ರೆಂಚ್ ಗಯಾನ, ಗ್ವಾಟೆಮಾಲ, ಹೈಟಿ ಹುಂಡುರಾಸ್, ಮಾರ್ಟಿನಿಕಿ, ಮೆಕ್ಸಿಕೋ, ಪನಾಮ, ಪೆರುಗ್ವೆ, ಸುರಿನೇಮ್, ವೆನಿಜುವೆಲಾ, ಪೋರ್ಟ್ ರಿಕೋ ಗಣರಾಜ್ಯ.
6 ಕೆರಿಬಿಯನ್-ದಕ್ಷಿಣ ಅಮೆರಿಕ ರಾಷ್ಟ್ರ
ಬಾರ್ಬಡಸ್, ಬೊಲಿವಿಯಾ, ಈಕ್ವೇಡಾರ್, ಗ್ವಡೆಲೋಪ್, ಸೈಂಟ್ ಮಾರ್ಟಿನ್, ಗಯಾನ ಮತ್ತು ಕೇಪ್ ವರ್ಡೆ ಹಾಗೂ ಸಮೊವ