ಕಾಪು ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದ ಹಿನ್ನೆಲೆಯಲ್ಲಿ ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಪು ಸಮುದಾಯಕ್ಕೆ ಸೇರಿದ ಕಾಂಗ್ರೆಸ್ ನಾಯಕ ಹಾಗೂ ನಟ ಚಿರಂಜೀವಿ ಅವರ ಸಹೋದರ ಪವನ್ ಕಲ್ಯಾಣ್ ಅವರು, ತುನಿ ಹಿಂಸಾಚಾರ ಘಟನೆಯಿಂದ ನನಗೆ ನೋವಾಗಿದೆ. ಉತ್ತ ಆಂಧ್ರ ಹಾಗೂ ತೆಲಂಗಾಣದಲ್ಲಿ ಕಾಪು ಜನಾಂಗವನ್ನು ಹಿಂದೂಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಆದರೆ ರಾಯಲ್ ಸೀಮಾದಲ್ಲಿ ಮಾತ್ರ ಹಿಂದೂಳಿದ ವರ್ಗಕ್ಕೆ ಸೇರಿಸಿಲ್ಲ ಎಂದರು.