ಪ್ರಧಾನ ಸುದ್ದಿ

ಉಗ್ರರಿಗೆ ಸ್ಫೂರ್ತಿಯಾಗಿದ್ದ ಜಾಕಿರ್ ನಾಯಕ್ ವಿರುದ್ಧ ಬಾಂಗ್ಲಾ ಸರ್ಕಾರದಿಂದಲೂ ತನಿಖೆ

ಉಗ್ರರಿಗೆ ಸ್ಫೂರ್ತಿಯಾಗಿದ್ದ ಜಾಕಿರ್ ನಾಯಕ್ ವಿರುದ್ಧ ಬಾಂಗ್ಲಾ ಸರ್ಕಾರದಿಂದಲೂ ತನಿಖೆ
ಜಾಕಿರ್ ನಾಯಕ್
Published On :

ಢಾಕಾ: ಇಸ್ಲಾಮ್ ಧರ್ಮದ ವಿವಾದಾತ್ಮಕ ಪ್ರಚಾರಕ ಜಾಕಿರ್ ನಾಯಕ್  ಅವರ ಇಸ್ಲಾಮ್ ಧರ್ಮದ ಸಂಪರ್ಕದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಬಾಂಗ್ಲಾದೇಶದ ಸರ್ಕಾರ ತಿಳಿಸಿದೆ.

ಢಾಕಾದಲ್ಲಿ ದಾಳಿ ನಡೆಸಿದ ಉಗ್ರರಿಗೆ ಸ್ಫೂರ್ತಿಯಾಗಿರುವ ಜಾಕಿರ್ ನಾಯಕ್ ನ ಪೀಸ್ ಟಿವಿ ಚಾನೆಲ್ ನ್ನು ನಿಷೇಧಿಸುವ ಬಗ್ಗೆಯೂ ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ಬಾಂಗ್ಲಾದೇಶದ ಗೃಹ ಸಚಿವ ಸಾದುಜ್ಜಮಾನ್ ಖಾನ್ ತಿಳಿಸಿದ್ದಾರೆ.

ಉಗ್ರರಿಗೆ ಸ್ಫೂರ್ತಿಯಾಗಿರುವ ಜಾಕಿರ್ ನಾಯಕ್ ಮೇಲೆ ಬಾಂಗ್ಲಾದೇಶದ ಗುಪ್ತಚರ ಇಲಾಖೆಗಳು ಕಣ್ಣಿಟ್ಟಿದ್ದು, ಆತನ ಚಲನವಲನಗಳನ್ನು ಗಮನಿಸುತ್ತಿವೆ ಎಂದು ಬಾಂಗ್ಲಾ ಸಚಿವರು ತಿಳಿಸಿದ್ದಾರೆ.ಜಾಕಿರ್ ನಾಯಕ್ ನ ಚಲನವಲನಗಳಷ್ಟೇ ಅಲ್ಲದೆ ಬಾಂಗ್ಲಾದೇಶದಲ್ಲಿ ಜಾಕಿರ್ ನಾಯಕ್ ನ ಹಣದ ವಹಿವಾಟಿನ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ, ಜಾಕಿರ್ ನಾಯಕ್ ನ ಪೀಸ್ ಟಿವಿ ಚಾನಲ್ ನ್ನು ನಿಷೇಧಿಸುವುದಕ್ಕೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳಲು ಮತ್ತಷ್ಟು ಕಾಲಾವಕಾಶ ಬೇಕು ಎಂದು ಬಾಂಗ್ಲಾ ಗೃಹ ಸಚಿವ ಖಾನ್ ಮಾಹಿತಿ ನೀಡಿದ್ದಾರೆ.

ಇನ್ನು ಜಾಕಿರ್ ನಾಯಕ್ ನ ಪೀಸ್ ಟಿವಿ ಕುರಿತು ಅಲ್ಲಿನ ಕೇಬಲ್ ಮಾಲೀಕರ ಸಂಘದ ಅಧ್ಯಕ್ಷ ಮೀರ್ ಹುಸೇನ್ ಸಹ ಅಸಮಾಧಾನ ವ್ಯಕ್ತಪಡಿಸಿದ್ದು ಈ ಹಿಂದೆ ನಾನು ಸಹ ಪೀಸ್ ಟಿವಿ ಚಾನಲ್ ನ್ನು ನೋಡುತ್ತಿದ್ದೆ. ಆದರೆ ದಾಳಿ ನಡೆದು ಉಗ್ರರಿಗೆ ಜಾಕಿರ್ ನಾಯಕ್ ಸ್ಫೂರ್ತಿಯಾಗಿದ್ದ ಎಂಬ ಮಾಹಿತಿ ತಿಳಿಯುತ್ತಿದ್ದಂತೆಯೇ ಚಾನಲ್ ನೋಡುವುದನ್ನು ಬಿಟ್ಟೆ, ತಕ್ಷಣವೇ ಚಾನಲ್ ನ್ನು ಪ್ರಸಾರ ಮಾಡುವುದನ್ನು ಸ್ಥಗಿತಗೊಳಿಸಬೇಕೆಂಬ ಅಭಿಪ್ರಾಯವಿದೆಯಾದರು ಸರ್ಕಾರದ ನಿರ್ದೇಶನ ಬರುವವರೆಗೂ ಆ ರೀತಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.