ಬಿಜೆಪಿ ಎದುರಿಸಲು ಜಾತ್ಯಾತೀತ ಪಕ್ಷಗಳು ಒಂದಾಗಬೇಕಿದೆ: ರಾಹುಲ್

ಭಾರತೀಯ ಜನತಾ ಪಕ್ಷವನ್ನು ಎದುರಿಸಲು ಜಾತ್ಯಾತೀತ ಪಕ್ಷಗಳು ಒಂದಾಗಬೇಕಿದೆ ಎಂದಿದ್ದಾರೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
Updated on: 
ನವದೆಹಲಿ: ಭಾರತೀಯ ಜನತಾ ಪಕ್ಷವನ್ನು ಎದುರಿಸಲು ಜಾತ್ಯಾತೀತ ಪಕ್ಷಗಳು ಒಂದಾಗಬೇಕಿದೆ ಎಂದಿದ್ದಾರೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ. 
ವಿವಿಧ ಪಕ್ಷಗಳು ಮತ್ತು ಮುಸ್ಲಿಂ ಸಂಘಟನೆಗಳು ಒಟ್ಟಾಗಿ ಸೇರಿದ್ದ ಸಭೆಯಲ್ಲಿ ಮಾತನಾಡಿದ ರಾಹುಲ್, ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್ ಎಸ್ ಎಸ್ ದೇಶವನ್ನು ಧರ್ಮ ಮತ್ತು ಜಾತಿ ಆಧಾರದಲ್ಲಿ ಒಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 
"ಜನರನ್ನು ಒಡೆಯುವುದು ಅತಿ ಸುಲಭ ಆದರೆ ಅವರನ್ನು ಒಗ್ಗೂಡಿಸುವುದು ಕಷ್ಟ" ಎಂದು ಜಮಾತ್ ಉಲೇಮಾ ಮುಖಂಡ ಸೋಮವಾರ ರಾತ್ರಿ ಆಯೋಜಿಸಿದ್ದ ಈದ್ ಮಿಲನ್ ಸ್ವಾಗತ ಕಾರ್ಯಕ್ರಮದಲ್ಲಿ ರಾಹುಲ್ ಹೇಳಿದ್ದಾರೆ.
ವಿವಿಧ ಪಕ್ಷದ ಮುಖಂಡರಾದ ಅಜಿತ್ ಸಿಂಗ್ (ಆರ್ ಎಲ್ ಡಿ), ಶರದ್ ಯಾದವ್ (ಜೆಡಿಯು), ಸೀತಾರಾಮ್ ಯೆಚೂರಿ (ಸಿಪಿಐ-ಎಂ), ಅತುಲ್ ಕುಮಾರ್ ಅಂಜನ್ (ಸಿಪಿಐ), ಅಶುಕ್ ಮಲಿಕ್ (ಸಮಾಜವಾದಿ ಪಕ್ಷ), ಸಂಜಯ್ ಸಿಂಗ್ (ಎಎಪಿ) ಹಾಗೂ ಜಮಾತ್ ಎ ಇಸ್ಲಾಮಿ, ಜಮಾತ್ ಅಹ್ಲೇ ಹದೀಸ್, ಮುಸ್ಲಿಂ ಮಜಲಿಸ್ ಮುಶ್ವಾರಾತ್ ಸಂಘಟನೆಗಳ ಮುಖಂಡರು ಮತ್ತಿತರು ಈ ಸಭೆಯಲ್ಲಿ ಹಾಜರಿದ್ದರು. 
ಉತ್ತರಪ್ರದೇಶದ ಉಸ್ತುವಾರಿ ಗುಲಾಬ್ ನಬಿ ಆಜಾದ್ ಒಳಗೊಂಡಂತೆ ಕಾಂಗ್ರೆಸ್ ನ ಕನಿಷ್ಠ 12 ಮುಖಂಡರು ಈ ಸಭೆಯಲ್ಲಿ ಭಾಗವಹಿಸಿದ್ದರು. 
ಜಾತ್ಯಾತೀತ ಮತಗಳು ಒಡೆದಿರುವುದು ಬಿಜೆಪಿಗೆ ಸಹಕಾರವಾಗಿ ರಾಜಕೀಯ ಮುನ್ನಡೆ ಪಡೆದಿದೆ ಎಂದು ರಾಹುಲ್ ಹೇಳಿದ್ದು "ಕೋಮುವಾದಿ ಪಡೆಗಳನ್ನು ಸೋಲಿಸಬೇಕಾದರೆ ನಾವು ಒಗ್ಗೂಡಬೇಕಾದ ಅವಶ್ಯಕತೆ ಇದೆ" ಎಂದು ಹೇಳಿದ್ದಾರೆ. 
"ಕೋಮುವಾದಿ ಮತ್ತು ಸರ್ವಾಧಿಕಾರಿ ಪಡೆಗಳು" ದೇಶದ ಜಾತ್ಯಾತೀತ ಗುಣವನ್ನು ಬದಲಾಯಿಸಲು ನಾವು ಬಿಡುವುದಿಲ್ಲ ಎಂದು ಜಮೀಯತ್ ಉಲೇಮಾ ಎ ಹಿಂದ್ ನ ಮೌಲಾನಾ ಆರ್ಷದ್ ಮದನಿ ಹೇಳಿದ್ದಾರೆ. 
ನಮ್ಮ ಸಂಸ್ಥೆ 1947 ರಲ್ಲಿ ದೇಶ ವಿಭಜನೆಯನ್ನು ವಿರೋಧಿಸಿತ್ತು ಎಂದಿರುವ ಅವರು "ನಾವು ಜಾತ್ಯಾತೀತ ಭಾರತವನ್ನು ಆಯ್ಕೆ ಮಾಡಿಕೊಂಡೆವು ಮತ್ತು ದೇಶದ ಜಾತ್ಯಾತೀತ ಗುಣವನ್ನು ಬದಲಾಯಿಸಲು ನಾವು ಬಿಡುವುದಿಲ್ಲ" ಎಂದಿದ್ದಾರೆ. 
ಭಾರತದ ಬಹುತೇಕರು ಜಾತ್ಯಾತೀತರು ಎಂದಿರುವ ಶರದ್ ಯಾದವ್ "ಆದರೆ ಜಾತ್ಯಾತೀತ ಮತಗಳು ಒಡೆದುಹೋದಾಗ ಬಿಜೆಪಿ ಮತ್ತು ಮಿತ್ರ ಪಕ್ಷಗಳಿಗೆ ಅನುಕೂಲವಾಗುತ್ತದೆ" ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com