

ನವದೆಹಲಿ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಇದೀಗ ರೆಸಾರ್ಟ್ ವಿವಾದ ಒಂದರಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ.
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಇದೀಗ ರೆಸಾರ್ಟ್ ವಿವಾದ ಒಂದರಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ.
ಉತ್ತರಾಖಂಡನ್ ಡೆಹ್ರಾಡೂನ್ ಜಿಲ್ಲೆಯಲ್ಲಿರುವ ಪ್ರವಾಸಿ ತಾಣ ಹಿಮಚ್ಚಾದಿತ ಪ್ರದೇಶ ಮಸೂರಿಯಲ್ಲಿ ತಾನು ಹೊಂದಿರುವ ರೆಸಾರ್ಟ್ ಅನ್ನು ಯಾವುದೇ ಆರ್ಥಿಕ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಸಚಿನ್ ಸ್ಫಷ್ಟಪಡಿಸಿದ್ದಾರೆ.
ಈ ರೆಸಾರ್ಟ್ ಹಾಗೂ ಕೇಂದ್ರ ಸರ್ಕಾರದ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ದಿ ಸಂಸ್ಥೆ(ಡಿಆರ್ಡಿಓ) ನಡುವೆ ಉಂಟಾಗಿರುವ ವಿವಾದದ ಪರಿಹಾರಕ್ಕೆ ಕೇಂದರ್ ರಕ್ಷಣಾ ಖಾತೆ ಸಚಿವ ಮನೋಹರ್ ಪರಿಕ್ಕರ್ ಮಧ್ಯಸ್ಥಿಕೆ ವಹಿಸುವಂತೆ ಸಚಿನ್ ಮನವಿ ಮಾಡಿದ್ದರು ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ತೆಂಡೂಲರ್ ಅವರ ವಾಣಿಜ್ಯ ವ್ಯವರಾಗಳ ಪಾಲುದಾರರೂ ಆಗಿರುವ ಸ್ನೇಹಿತ ಸಂಜಯ್ ನಾರಂಗ್ ಜತೆಗಿ ಪಾಲುದಾರಿಕೆಯಲ್ಲಿ ಸಚಿನ್ ಈ ರೆಸಾರ್ಟ್ ಕೊಂಡಿದ್ದು, ಮಸೌರಿಯ ದಾಲ್ಹಿಯ ಬ್ಯಾಂಕ್ ನ ಲಾಂಡೋರ್ ಪ್ರಾಂತ್ಯದಲ್ಲಿದೆ. ಎನ್ಸಿಝಡ್ ಸ್ಥಳದಲ್ಲಿನ ಒಂದು ಭಾಗದಲ್ಲಿ ಟೆನಿಸ್ ಕೋರ್ಟ್ ಕಟ್ಟುತ್ತೇವೆಂದು ನಾರಂಗ್ ಡಿಆರ್ಡಿಒದಿಂದ ಅನುಮತಿ ಪಡೆದು, ಇದೀಗ ಅಲ್ಲಿ ದೊಡ್ಡ ಕಟ್ಟಡವನ್ನೇ ನಾರಂಗ್ ನಿರ್ಮಿಸಿದ್ದಾರೆ. ಇದು ಡಿಆರ್ಡಿಒನ ಎನ್ಸಿಝಡ್ ವ್ಯಾಪ್ತಿಯೊಳಗೆ ಬರುತ್ತಿಲ್ಲ ಎಂದು ನಾರಂಗ್ ಅವರು ವಾದಿಸುತ್ತಿದ್ದರೆ, ಇತ್ತ ಡಿಆರ್ಡಿಒ ತಾಂತ್ರಿಕ ವಿದ್ಯಾ ಸಂಸ್ಥೆಯು ಇದು ಎನ್ಸಿಝಡ್ ಭಾಗವೆಂದು ಹೇಳುತ್ತಿದೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಆರ್ಡಿಒ ಅಧಿಕಾರಿಗಳು ಸಿಬಿಐಗೆ ದೂರು ನೀಡಿದ್ದಾರೆ.