'ಅಸಹಿಷ್ಣುತೆ' ಬಗೆಗೆ ಅಮೀರ್ ಖಾನ್ ಅವರ ಹೇಳಿಕೆಯನ್ನು ಟೀಕೆ ಮಾಡಲು ಭದ್ರತಾ ಸಚಿವ ಮನೋಹರ್ ಪರ್ರಿಕರ್ ನೆನ್ನೆ ಮುಂದಾದರೆ, ಇದು ಹಲವು ರಾಜಕಾರಣಿಗಳು ಮತ್ತು ತಾರೆಯರಿಗೆ ಆಕ್ರೋಶ ತರಿಸಿದೆ. ತಾರೆಯರು ಮಾತ್ರವಲ್ಲ ಸಾಮಾನ್ಯ ಟ್ವಿಟ್ಟರ್ ಬಳಕೆದಾರರು ಕೂಡ, ಅಮೀರ್ ಖಾನ್ ಅವರನ್ನು ಸ್ನ್ಯಾಪ್ ಡೀಲ್ ಸಂಸ್ಥೆಯ ಪ್ರಚಾರಕ ಸ್ಥಾನದಿಂದ ಕೆಳಗಿಳಿಸಲು ಸರ್ಕಾರ ಹಿನ್ನಲೆಯಲ್ಲಿ ಕೆಲಸ ಮಾಡಿದೆ ಎಂದು ಪರ್ರಿಕರ್ ಒಪ್ಪಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.