

ಚೆನ್ನೈ: ತಮಿಳುನಾಡು ರಾಜಧಾನಿಯ ಮೆಟ್ರೋ ಸೇವೆ ವಿಸ್ತರಣೆಗೆ ಕೇಂದ್ರ ಸಂಪುಟ ಅಸ್ತು ಎಂದಿರುವುದಕ್ಕೆ ಮುಖ್ಯಮಂತ್ರಿ ಜೆ ಜಯಲಲಿತಾ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಿದ್ದಾರೆ.
ಮೋದಿಯವರಿಗೆ ಬರೆದ ಪತ್ರದಲ್ಲಿ "ಮೊದಲನೇ ಹಂತದ ಕಾರಿಡಾರ್೧ ಮೆಟ್ರೋ ರೈಲು ಸೇವೆ ಯೋಜನೆಯನ್ನು ೩೩೭೦ ಕೋಟಿ ವೆಚ್ಚದಲ್ಲಿ ೯.೫೨ ಕಿಲೋ ಮೀಟರ್ ವಿಸ್ತರಣೆ ಮಾಡಲು ಸಂಪುಟ ಸಭೆ ಒಪ್ಪಿಕೊಂಡಿರುವುದು ತಿಳಿದುಬಂದಿದೆ.
"ತಮಿಳುನಾಡು ಸರ್ಕಾರ ಮತ್ತು ಚೆನ್ನೈ ಜನತೆಯ ಪರವಾಗಿ ಈ ವಿಸ್ತರಣೆಗೆ ಅವಕಾಶ ನೀಡಿದ್ದಕ್ಕೆ ಧನ್ಯವಾದ ಹೇಳುತ್ತೇನೆ" ಎಂದು ಅವರು ಹೇಳಿದ್ದಾರೆ.
ಅಲ್ಲದೆ ಏಪ್ರಿಲ್ ನಿಂದ ಜೂನ್ ವರೆಗೆ ಮೂರು ತಿಂಗಳ ಕಾಲ ತಮಿಳುನಾಡಿಗೆ ಆಹಾರ ಧಾನ್ಯಗಳನ್ನು ವಿಶೇಷವಾಗಿ ಅನುದಾನ ನೀಡಿರುವುದಕ್ಕೆ ಕೂಡ ಜಯಲಲಿತಾ ಮೋದಿ ಅವರಿಗೆ ಧನ್ಯವಾದ ಹೇಳಿದ್ದಾರೆ.