ಹರ್ಯಾಣದ ಖಾಸಗಿ ಬಸ್ ನಲ್ಲಿ ಸ್ಫೋಟ; ನಾಲ್ವರಿಗೆ ಗಾಯ

ಹರ್ಯಾಣದ ಫತೇಹಾಬಾದ್ ಜಿಲ್ಲೆಯಲ್ಲಿ ಖಾಸಗಿ ಬಸ್ ಒಂದರಲ್ಲಿ ಸ್ಫೋಟಗೊಂಡಿದ್ದಕ್ಕೆ ಕನಿಷ್ಠ ನಾಲ್ವರು ಗಾಯಗೊಂಡಿದ್ದಾರೆ ಎಂದು ಮಂಗಳವಾರ ಪೊಲೀಸರು ಹೇಳಿದ್ದಾರೆ.
ಸ್ಫೋಟಗೊಂಡ ಬಸ್ಸಿನ ಒಂದು ದೃಶ್ಯ
ಸ್ಫೋಟಗೊಂಡ ಬಸ್ಸಿನ ಒಂದು ದೃಶ್ಯ

ಫತೇಹಾಬಾದ್: ಹರ್ಯಾಣದ ಫತೇಹಾಬಾದ್ ಜಿಲ್ಲೆಯಲ್ಲಿ ಖಾಸಗಿ ಬಸ್ ಒಂದರಲ್ಲಿ ಸ್ಫೋಟಗೊಂಡಿದ್ದಕ್ಕೆ ಕನಿಷ್ಠ ನಾಲ್ವರು ಗಾಯಗೊಂಡಿದ್ದಾರೆ ಎಂದು ಮಂಗಳವಾರ ಪೊಲೀಸರು ಹೇಳಿದ್ದಾರೆ.

ಗಾಯಗೊಂಡವರನ್ನು ಫತೇಹಾಬಾದ್ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.

ಜಖಾಲ್ ಮಂಡಿಯಿಂದ ಫತೇಹಾಬಾದ್ ಪಟ್ಟಣದ ಕಡೆಗೆ ಹೋಗುವಾಗ, ಭೂನಾ ಎಂಬ ಜಾಗದಲ್ಲಿ ಬಸ್ಸಿನೊಳಗೆ ಸ್ಫೋಟವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕಳೆದ ಒಂದು ತಿಂಗಳಲ್ಲಿ ಹರ್ಯಾಣದಲ್ಲಿ ನಡೆದ ಮೂರನೇ ಸ್ಪೋಟ ಇದಾಗಿದೆ. ಇದಕ್ಕೂ ಮುಂಚೆ ಪಾಣಿಪತ್ ಜಿಲ್ಲೆಯಲ್ಲಿ ರೈಲ್ವೇ ಭೋಗಿಯೊಂದರಲ್ಲಿ ಸ್ಫೋಟವಾಗಿತ್ತು.

ಕಳೆದ ವಾರ ಕೂಡ ಬಸ್ ಒಂದರಲ್ಲಿ ಘಟಿಸಿದ ಸ್ಫೋಟದಿಂದ ೮ ಜನ ಗಾಯಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com