ಭಾರತ ಎನ್ ಎಸ್ ಜಿ ಸೇರ್ಪಡೆಗೆ ವಿರೋಧ; ಚೀನಾಗೆ ಟಾಂಗ್ ನೀಡಲು "ಪ್ಲಾನ್ ಬಿ" ಸಿದ್ಧ

ಪರಮಾಣು ಪೂರೈಕೆದಾರ ಒಕ್ಕೂಟ (ಎನ್‍ಎಸ್‍ಜಿ)ಕ್ಕೆ ಭಾರತದ ಸೇಪ೯ಡೆಯನ್ನು ವಿರೋಧಿಸುತ್ತಿರುವ ಚೀನಾಕ್ಕೆ ಪ್ರಬಲ ತಿರುಗೇಟು ನೀಡಲು ಭಾರತ ಮುಂದಾಗಿದ್ದು, ಇದಕ್ಕಾಗಿ ತನ್ನದೇ ಆದ ಪ್ಲಾನ್ ಬಿ ಸಿದ್ಧಪಡಿಸಿಕೊಂಡಿದೆ...
ಭಾರತದ ಎನ್ ಎಸ್ ಜಿ ಸೇರ್ಪಡೆ ವಿಚಾರ (ಸಂಗ್ರಹ ಚಿತ್ರ)
ಭಾರತದ ಎನ್ ಎಸ್ ಜಿ ಸೇರ್ಪಡೆ ವಿಚಾರ (ಸಂಗ್ರಹ ಚಿತ್ರ)
Updated on

ಸಿಯೋಲ್: ಪರಮಾಣು ಪೂರೈಕೆದಾರ ಒಕ್ಕೂಟ (ಎನ್‍ಎಸ್‍ಜಿ)ಕ್ಕೆ ಭಾರತದ ಸೇಪ೯ಡೆಯನ್ನು ವಿರೋಧಿಸುತ್ತಿರುವ ಚೀನಾಕ್ಕೆ ಪ್ರಬಲ ತಿರುಗೇಟು ನೀಡಲು ಭಾರತ ಮುಂದಾಗಿದ್ದು, ಇದಕ್ಕಾಗಿ ತನ್ನದೇ ಆದ ಪ್ಲಾನ್ ಬಿ ಸಿದ್ಧಪಡಿಸಿಕೊಂಡಿದೆ.

ಅಣ್ವಸ್ತ್ರ ನಿಶ್ಯಸ್ತ್ರೀಕರಣ ಒಪ್ಪ೦ದ (ಎನ್‍ಪಿಟಿ)ಕ್ಕೆ ಭಾರತ ಸಹಿ ಹಾಕಿಲ್ಲ ಎ೦ಬ ಕಾರಣವೊಂದನ್ನೇ ಮುಂದಿಟ್ಟುಕೊಂಡು ಚೀನಾ ಸೇರಿ ಕೆಲ ರಾಷ್ಟ್ರಗಳು ಭಾರತದ ಎನ್‍ಎಸ್‍ಜಿ ಸೇರ್ಪಡೆಯನ್ನು ವಿರೋಧಿಸುತ್ತಿದ್ದು, ಇದೀಗ ಈ ನಿಯಾಮಾವಳಿಯನ್ನೇ ತಿದ್ದುಪಡಿ ಮಾಡಲು ಭಾರತ ಮಾಸ್ಟರ್ ಪ್ಲಾನ್ ರೂಪಿಸಿದೆ. ಅದರಂತೆ ಎನ್‍ಎಸ್‍ಜಿಯ ಪ್ರಸ್ತುತ ಅಧ್ಯಕ್ಷ ಸ್ಥಾನ ಹೊ೦ದಿರುವ ಅಜೆ೯೦ಟೀನಾ ಸೇರಿದಂತೆ ಭಾರತದ ಪರವಾಗಿರುವ ಹಲವು ರಾಷ್ಟ್ರಗಳ ಬೆಂಬಲ ಪಡೆದು ಎನ್‍ಎಸ್‍ಜಿ ನಿಯಮಾವಳಿಗೇ ತಿದ್ದುಪಡಿ ತರಲು ಸದಸ್ಯ ರಾಷ್ಟ್ರಗಳು ಗ೦ಭೀರ ಚಿ೦ತನೆ ನಡೆಸುತ್ತಿವೆ ಎ೦ದು ತಿಳಿದುಬಂದಿದೆ.

ಹೀಗಾಗಿ ಎನ್‍ಪಿಟಿಗೆ ಸಹಿ ಹಾಕದ ರಾಷ್ಟ್ರಗಳೂ ಎನ್‍ಎಸ್‍ಜಿ ಸೇರುವ ಸಾಧ್ಯತೆ ಬಗ್ಗೆ ಹೊಸ ನೀತಿ ರೂಪಿಸಲು ಬಗ್ಗೆ ಅಜೆ೯೦ಟೀನಾ ನೇತೃತ್ವದಲ್ಲಿ ಹಲವು ರಾಷ್ಟ್ರಗಳು ಚಿ೦ತನೆ ನಡೆಸಲಿದ್ದು, ಈ ನೀತಿ ಜಾರಿಗೆ ಬ೦ದಲ್ಲಿ ಭಾರತದ ದಶಕಗಳ ಕನಸಿನ ಪರಮಾಣು ಪೂರೈಕೆದಾರರ ಒಕ್ಕೂಟ ಸೇಪ೯ಡೆ ಸುಗಮವಾಗಲಿದೆ. ಅಮೆರಿಕ ಅಧ್ಯಕ್ಷ  ಬರಾಕ್ ಒಮಾಮ ಅಧಿಕಾರಾವಧಿಯಲ್ಲೇ ಎನ್‍ಎಸ್‍ಜಿ ಸದಸ್ಯತ್ವ ಪಡೆಯುವುದು ಭಾರತದ ಗುರಿ ಎನ್ನಲಾಗಿದೆಯಾದರೂ, ಎನ್‍ಎಸ್‍ಜಿ ನೀತಿ ತಿದ್ದುಪಡಿಗೆ ಸಾಕಷ್ಟು ಸಮಯ ಹಿಡಿಯುತ್ತಿದ್ದು, ಪ್ರಸಕ್ತ ವಷ೯ ಭಾರತದ ಸೇಪ೯ಡೆ ಅನುಮಾನವಾಗಿದೆ.

ಎನ್ ಎಸ್ ಜಿ ಸೇರ್ಪಡೆ ಭಾರತಕ್ಕೆ ಅನಿವಾಯ೯
ಅಗತ್ಯ ಇಂಧನ ಬೇಡಿಕೆ ಈಡೇರಿಸಲು ಭಾರತದ ಎನ್ ಎಸ್ ಜಿ ಸೇರ್ಪಡೆ ಅನಿವಾರ್ಯವಾಗಿದ್ದು, 2030ರ ವೇಳೆಗೆ 63 ಸಾವಿರ ಮೆಗಾವಾಟ್ ವಿದ್ಯುತ್‍ನ್ನು ಅಣುಶಕ್ತಿಯಿ೦ದ ಉತ್ಪಾದಿಸುವ ಗುರಿಯನ್ನು ಭಾರತ ಹೊಂದಿದೆ. ಎನ್‍ಎಸ್‍ಜಿ ಸದಸ್ಯತ್ವ ದೊರೆಯದ ಹೊರತಾಗಿ ಯುರೇನಿಯ೦ ಹಾಗೂ ಅಣ್ವಸ್ತ್ರ ತ೦ತ್ರಜ್ಞಾನ ಭಾರತಕ್ಕೆ ದೊರೆಯುವುದಿಲ್ಲ. ಈಗಾಗಲೇ ಸದಸ್ಯತ್ವ ಹೊ೦ದಿರುವ ರಾಷ್ಟ್ರಗಳು ಭಾರತಕ್ಕೆ ತ೦ತ್ರಜ್ಞಾನ ಹಸ್ತಾ೦ತರಿಸಬೇಕಾದರೆ ಭಾರತ ಎನ್‍ಎಸ್‍ಜಿ ಸದಸ್ಯತ್ವ ಪಡೆಯುವುದು ಅನಿವಾಯ೯. ಹೀಗಾಗಿ ಎನ್ ಎಸ್ ಜಿ ಸದಸ್ಯತ್ವ ಭಾರತಕ್ಕೆ ಅನಿವಾರ್ಯವಾಗಿದ್ದು, ಒ೦ದು ವೇಳೆ ಸದಸ್ಯತ್ವ ಸಿಕ್ಕರೆ ಭಾರತದಲ್ಲಿನ ವಿದ್ಯುತ್ ಕೊರತೆ ಗಣನೀಯವಾಗಿ ಇಳಿಕೆಯಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com