ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ನ ಮೂವರು ಉಗ್ರರ ಎನ್ ಕೌಂಟರ್

ಕಾಶ್ಮೀರದಲ್ಲಿ ಬುಧವಾರ ಮಾ.2 ರಂದು ತಡರಾತ್ರಿ ಮೂವರು ಉಗ್ರರನ್ನು ಸೇನಾ ಪಡೆ ಹತ್ಯೆ ಮಾಡಿದೆ.
ಹಿಜ್ಬುಲ್ ಮುಜಾಹಿದ್ದೀನ್ ನ ಮೂವರು ಉಗ್ರರ ಎನ್ ಕೌಂಟರ್
ಹಿಜ್ಬುಲ್ ಮುಜಾಹಿದ್ದೀನ್ ನ ಮೂವರು ಉಗ್ರರ ಎನ್ ಕೌಂಟರ್
Updated on

ಶ್ರೀನಗರ: ಕಾಶ್ಮೀರದಲ್ಲಿ ಬುಧವಾರ ಮಾ.2 ರಂದು ತಡರಾತ್ರಿ ಮೂವರು ಉಗ್ರರನ್ನು ಸೇನಾ ಪಡೆ ಹತ್ಯೆ ಮಾಡಿದೆ.
ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದಲ್ಲಿ ಅಡಗಿದ್ದ ಉಗ್ರರ ವಿರುದ್ಧ ಮಾ.2 ರ ಸಂಜೆಯಿಂದಲೇ ಸೇನಾ ಪಡೆ ಕಾರ್ಯಾಚರಣೆಗೆ ಇಳಿದಿತ್ತು, ಮನೆಯೊಂದರಲ್ಲಿ ಅವಿತಿದ್ದ ಉಗ್ರರನ್ನು ಮಧ್ಯರಾತ್ರಿ ವೇಳೆಗೆ ಹೊಡೆದುರುಳಿಸುವಲ್ಲಿ ಸೇನಾ ಪಡೆ ಯಶಸ್ವಿಯಾಗಿದೆ.
ಹತ್ಯೆಯಾಗಿರುವ ಮೂವರು ಉಗ್ರರು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯವರೆಂದು ಸೇನಾ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ಆಶಿಕ್ ಹುಸೇನ್ ಭಟ್, ಮೊಹಮ್ಮದ್ ಇಸಾಕ್ ಪಾರ್ರಿ, ಆಸೀಫ್ ಅಹ್ಮದ್ ಮೀರ್  ಎಂದು ಗುರುತಿಸಲಾಗಿದ್ದು ಆಶಿಕ್ ಹುಸೇನ್ ಭಟ್ ಕಳೆದ ವರ್ಷ ಬಿಎಸ್ ಎಫ್ ಕ್ಯಾಂಪ್ ಮೇಲೆ ದಾಳಿ ನಡೆಸಿದ ಉಗ್ರರಿಗೆ ಆಶ್ರಯ ನೀಡಿದ್ದ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ಉಗ್ರರಿಂದ ಮೂರು ಎಕೆ ರೈಫಲ್ಸ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ, ಸೇನಾ ಪಡೆ ಗುಂಡಿನ ದಾಳಿ ಸುದ್ದಿ ಹರಡುತ್ತಿದ್ದಂತೆಯೇ ಸೇನಾಪಡೆ ಹಾಗೂ ಕಲ್ಲುತೂರಾಟಗಾರರ ನಡುವೆ ಘರ್ಷಣೆ ಉಂಟಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com