ರೈತರ ಮೇಲಿನ ಲಾಠಿ ಚಾರ್ಜ್'ಗೆ ಖಂಡನೆ: ಇಂದು ಕೋಲಾರ ಬಂದ್

ಶಾಶ್ವತ ನೀರಾವರಿಗೆ ಆಗ್ರಹಿಸಿ ನಡೆಸುತ್ತಿದ್ದ ಪ್ರತಿಭಟನೆ ವೇಳೆ ಪೊಲೀಸರು ನಡೆದಿ ಲಾಠಿ ಚಾರ್ಜ್ ನ್ನು ಖಂಡಿಸಿರುವ ರೈತರು ಕೋಲಾರದಾದ್ಯಂತ ಶುಕ್ರವಾರ ಬಂದ್ ಗೆ ಕರೆ ನೀಡಿದ್ದಾರೆ...
ಪ್ರತಿಭಟನೆ ವೇಳೆ ಟಯರ್ ಗಳಿಗೆ ಬೆಂಕಿ ಹಚ್ಚಿರುವ ರೈತರು
ಪ್ರತಿಭಟನೆ ವೇಳೆ ಟಯರ್ ಗಳಿಗೆ ಬೆಂಕಿ ಹಚ್ಚಿರುವ ರೈತರು

ಕೋಲಾರ: ಶಾಶ್ವತ ನೀರಾವರಿಗೆ ಆಗ್ರಹಿಸಿ ನಡೆಸುತ್ತಿದ್ದ ಪ್ರತಿಭಟನೆ ವೇಳೆ ಪೊಲೀಸರು ನಡೆದಿ ಲಾಠಿ ಚಾರ್ಜ್ ನ್ನು ಖಂಡಿಸಿರುವ ರೈತರು ಕೋಲಾರದಾದ್ಯಂತ ಶುಕ್ರವಾರ ಬಂದ್ ಗೆ ಕರೆ ನೀಡಿದ್ದಾರೆ.

ರೈತರ ಮೇಲಿನ ಪೊಲೀಸರ ದೌರ್ಜನ್ಯಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಶಾಶ್ವತ ನೀರಾವರಿ ಹೋರಾಟ ಸಮಿತಿ ಇಂದು ಕೋಲಾರದಾದ್ಯಂತ ಬಂದ್'ಗೆ ಕರೆ ನೀಡಿದ್ದು, ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಪ್ರತಿಭಟನೆ ನಡೆಸುತ್ತಿದೆ. ಎಪಿಎಂಸಿ ಯಾರ್ಡ್ ಬಳಿ ಬಸ್ ಗಳ ಮೇಲೂ ರೈತರು ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೆ, ರಸ್ತೆ ಮಧ್ಯೆಯೇ ಟಯರ್ ಗಳಿಗೆ ಬೆಂಕಿ ಹಚ್ಚಿ, ಸಾರಿಗೆ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ರೈತ ಆಕ್ರೋಶಕ್ಕೆ ಈಗಾಗಲೇ 2 ಕೆಎಸ್ ಆರ್ ಟಿಸಿ ಬಸ್ ಗಳ ಗಾಜು ಪುಡಿಪುಡಿಗೊಂಡಿದೆ.

ರೈತರು ನೀಡಿರುವ ಬಂದ್ ಕರೆ ಈಗಾಗಲೇ ಗದಗ ಹಾಗೂ ನರಗುಂದ ಪ್ರದೇಶಗಳಲ್ಲಿ ಬೆಂಬಲ ವ್ಯಕ್ತವಾಗಿದ್ದು, ನಾಗರಿಕರು ಸ್ವಯಂ ಪ್ರೇರಿತವಾಗಿ ಅಂಗಡಿಮುಂಗಟ್ಟುಗಳನ್ನು ಮುಚ್ಚಿ ಬೆಂಬಲ ವ್ಯಕ್ತಪಡಿಸಿದ್ದಾರೆ. ರೈತರು ನಡೆಸುತ್ತಿರುವ ಪ್ರತಿಭಟನೆಯಿಂದಾಗಿ ಈಗಾಗಲೇ ಮುಂಜಾಗ್ರತಾ ಕ್ರಮಕೈಗೊಂಡಿರುವ ಅಲ್ಲಿನ ಜಿಲ್ಲಾಧಿಕಾರಿ, ಕೋಲಾರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com