

ನವದೆಹಲಿ: ಇಶ್ರತ್ ಜಹಾನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಪ್ರಮುಖ ದಾಖಲೆಗಳು ಸಚಿವಾಲಯದಿಂದ ಕಾಣೆಯಾಗಿವೆ ಎಂದು ಗೃಹಸಚಿವ ರಾಜನಾಥ್ ಸಿಂಗ್ ಗುರುವಾರ ಹೇಳಿದ್ದಾರೆ.
"ಅಂದಿನ ಗೃಹ ಕಾರ್ಯದರ್ಶಿ ೨೦೦೯ರಲ್ಲಿ ಅಟಾರ್ನಿ ಜನರಲ್ ಅವರಿಗೆ ಬರೆದ ಎರಡು ಪತ್ರಗಳು ಕಾಣೆಯಾಗಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಅಟಾರ್ನಿ ಜನರಲ್ ಎರಡು ಅಫಿಡವಿಟ್ ಗಳನ್ನು ನಮೂದಿಸಿದ್ದಾರೆ. ಅವುಗಳು ಲಭ್ಯವಿಲ್ಲ" ಎಂದು ಇಶ್ರತ್ ಜಹಾನ್ ನಕಲಿ ಎಂಕೌಂಟರ್ ಪ್ರಕರಣದ ಬಗ್ಗೆ ಲೋಕಸಭೆಯಲ್ಲಿ ಚರ್ಚಿಸುವಾಗ ರಾಜನಾಥ್ ಸಿಂಗ್ ಹೇಳಿದ್ದಾರೆ.
ಕಾಂಗ್ರೆಸ್ ಮುಖಂಡ ಪಿ ಚಿದಂಬರಮ್ ಅವರ ಹೆಸರನ್ನು ಹೇಳದೆ, ಆ ಅಫಿಡೆವಿಟ್ ಗಳನ್ನು ಗೃಹ ಸಚಿವರ ಹಸ್ತಕ್ಷೇಪದಿಂದ ತಿದ್ದಲಾಗಿದೆ ಎಂದು ಕೂಡ ರಾಜನಾಥ್ ಆರೋಪಿಸಿದ್ದಾರೆ.