ಹಾಪುರ: ದೆಹಲಿಯಿಂದ ಫೈಜಾಬಾದ್ಗೆ ಹೊರಟ್ಟಿದ್ದ ದೆಹಲಿ-ಫೈಜಾಬಾದ್ ಎಕ್ಸ್ಪ್ರೆಸ್ (14206) ರೈಲಿನ 8 ಬೋಗಿಗಳು ಉತ್ತರ ಪ್ರದೇಶದ ಹಾಪುರದ ಗುರುಮುಖುಟೇಶ್ವರದ ಬಳಿ ಭಾನುವಾರ ರಾತ್ರಿ 9 ಗಂಟೆಗೆ ಹಳಿ ತಪ್ಪಿದ್ದು, ಈ ಘಟನೆಯಲ್ಲಿ 70 ಜನರಿಗೆ ಗಾಯಗಳಾಗಿವೆ.
ಮೊರದಾಬಾದ್ ವಿಭಾಗದ ಗುರುಮುಖುಟೇಶ್ವರ ಮತ್ತು ಖಂದಾದರ್ ಸ್ಟೇಷನ್ಗಳ ನಡುವೆ ರೈಲು ಹಾದುಹೋಗುವಾಗ ಈ ಘಟನೆ ಸಂಭವಿಸಿದೆ ಎಂದು ಬಲ್ಲಮೂಲಗಳು ಹೇಳಿವೆ.
ಗಾಯಗೊಂಡವರನ್ನು ಮೀರತ್, ಗಾಜಿಯಾಬಾದ್ ಮತ್ತು ಹಾಪುರ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಘಟನೆಯಿಂದ ಈ ಭಾಗದ ರೈಲು ಸಂಚಾರ ಅಸ್ತವ್ಯಸ್ಥಗೊಂಡಿದ್ದು, 29 ರೈಲುಗಳ ಮಾರ್ಗವನ್ನು ಬದಲಿಸಲಾಗಿತ್ತು. 8 ರೈಲುಗಳನ್ನು ರದ್ದು ಮಾಡಲಾಗಿದೆ.
ಹಾನಿಯಾಗದೇ ಇದ್ದ ರೈಲು ಬೋಗಿಗಳನ್ನು ಹೊತ್ತು ರಾತ್ರಿ 10.20ರ ವೇಳೆಗೆ ಪ್ರಸ್ತುತ ರೈಲು ಗಮ್ಯ ತಲುಪಿದೆ.
ಮೀರತ್ ಜಿಲ್ಲಾ ಆಸ್ಪತ್ರೆ ತುರ್ತು ಸಹಾಯವಾಣಿ ಸಂಖ್ಯೆ -09410609434.