ನನ್ನನ್ನು ಕಿರ್ಕಕ್ ಬಳಿ ಅಪಹರಿಸಿದ ಉಗ್ರರು, ಆಮೇಲೆ ಮೋಸುಲ್‌ಗೆ ಕರೆದೊಯ್ದರು. ಅಲ್ಲಿದ್ದ ಅಬು ಧಾರ್ ಎಂಬಾತ ಯಾಜಿದಿ ಹುಡುಗಿಯರನ್ನು ಗುಲಾಮರನ್ನಾಗಿ ಇಟ್ಟುಕೊಂಡಿದ್ದ ಎಂದು ಬರಾಕಾತ್ ಹೇಳಿದ್ದಾಳೆ. ಧಾರ್ ಅವರ ಫೋಟೋ ತೋರಿಸಿದಾಗ ಬಾಲಕಿ ಆತನ ಗುರುತು ಹಿಡಿದಿದ್ದಾಳೆ. ಆದರೆ ಆ ಬಾಲಕಿ ಹೇಳುತ್ತಿರುವ ವ್ಯಕ್ತಿಯೇ ಧಾರ್ ಎಂಬುದಕ್ಕೆ ಸಾಕ್ಷ್ಯಗಳೇನೂ ಇಲ್ಲ ಎಂದು ಪತ್ರಿಕೆ ವರದಿಯಲ್ಲಿ ಹೇಳಲಾಗಿದೆ.