ವಿದ್ಯಾರ್ಥಿಗಳ ದೂರಿನ ಮೇರೆಗೆ ಮೂವರು ಶಿಕ್ಷಕರನ್ನು ಸೇವೆಯಿಂದ ರದ್ದುಪಡಿಸಿದ ದೆಹಲಿ ಸಚಿವ

ನವದೆಹಲಿ: ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ನೀಡಿರುವ ದೂರಿಗೆ ಪ್ರತಿಕ್ರಿಯಿಸಿರುವ ದೆಹಲಿ ಶಿಕ್ಷಣ ಸಚಿವ ಮನೀಶ್ ಸಿಸೋಧಿಯಾ ಶನಿವಾರ ಮೂವರು ಶಿಕ್ಷಕರನ್ನು ಸೇವೆಯಿಂದ ರದ್ದುಗೊಳಿಸಿದ್ದು ಇನ್ನು ಮೂವರನ್ನು ವಜಾ ಮಾಡುವಂತೆ ಆದೇಶಿಸಿದ್ದಾರೆ.
ಲಜಪತ್ ನಗರದ ಶಹೀದ್ ಹೇಮು ಕಲ್ಯಾಣಿ ಸರ್ವೋದಯ ಬಾಲ ವಿದ್ಯಾಲಯ ಶಾಲೆಗೆ ಅನಿರೀಕ್ಷಿತ ಭೇಟಿ ನೀಡಿದ ಸಿಸೋದಿಯ ಅವರಿಗೆ ಶಾಲಾ ಸಿಬ್ಬಂದಿಯವರ ಬಗ್ಗೆ ೯ ನೆಯ ಮತ್ತು ೧೨ ನೆಯ ತರಗತಿಯ ವಿದ್ಯಾರ್ಥಿಗಳು ದೂರು ನೀಡಿದ್ದರು ಎಂದು ದೆಹಲಿ ಸರ್ಕಾರ ತಿಳಿಸಿದೆ.
ವಿದ್ಯಾರ್ಥಿಗಳು ಮುಕ್ತವಾಗಿ ದೂರು ನೀಡಲು ಅನುವಾಗುವಂತೆ ಪ್ರಾಂಶುಪಾಲ ಮತ್ತು ಶಿಕ್ಷಕರನ್ನು ಶಾಲಾ ಕೊಠಡಿಯನ್ನು ತೊರೆಯುವಂತೆ ಹೇಳಿದ್ದಾರೆ. "ಆಗ ವಿದ್ಯಾರ್ಥಿಗಳು, ತಮ್ಮ ವಿರುದ್ಧ ದೈಹಿಕ ಶಿಕ್ಷೆ ನೀಡುವ ಮತ್ತು ಕೆಟ್ಟ ಮಾತುಗಳಲ್ಲಿ ನಿಂದಿಸುವ ಇಬ್ಬರು ಶಿಕ್ಷಕರ ವಿರುದ್ಧ ದೂರಿದ್ದಾರೆ" ಎಂದು ಹೇಳಿಕೆ ತಿಳಿಸಿದೆ.
ಅಲ್ಲದೆ ಭೌತಶಾಸ್ತ್ರ ವಿಷಯದ ಪಾಠ ಅರ್ಥವಾಗುವುದಿಲ್ಲ ಎಂದು, ಯಾವುದೇ ಪ್ರಾಯೋಗಿಕ ತರಗತಿಗಳು ನಡೆಯುತ್ತಿಲ್ಲ ಎಂದು ಕೂಡ ವಿದ್ಯಾರ್ಥಿಗಳು ದೂರಿದ್ದಾರೆ.
"ವಿಜ್ಞಾನ ಶಿಕ್ಷಕ, ಸಮಾಜ ವಿಜ್ಞಾನದ ಟ್ರೈನೀ ಶಿಕ್ಷಕ ಮತ್ತು ಭೌತಶಾಸ್ತ್ರದ ಶಿಕ್ಷಕರನ್ನು ಸೇವೆಯಿಂದ ರದ್ದುಗೊಳಿಸಿ ಹಾಗು ಹಿಂದಿ, ಅಕ್ಕೌಂಟ್ಸ್ ಶಿಕ್ಷಕರನ್ನು ಹಾಗೂ ಉಪ ಪ್ರಾಂಶುಪಾಲರನ್ನು ವಜಾ ಮಾಡಲಾಗಿದೆ" ಎಂದು ಹೇಳಿಕೆ ತಿಳಿಸಿದೆ.
ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಮತ್ತು ಸೂಕ್ಷತೆಯಿಂದ ಕಾಣುವಂತೆ ಪ್ರಾಂಶುಪಾಲರಿಗೆ ಸಿಸೋಧಿಯಾ ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


