ಪ್ರಧಾನ ಸುದ್ದಿ

ಸೋನಿಯಾ ಗಾಂಧಿ ಕಾಂಗ್ರೆಸ್ ಅನ್ನು ಒಗ್ಗೂಡಿಸುವ ಅಂಶ: ವೆಂಕಯ್ಯ ನಾಯ್ಡು

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಏರಿಸಬಹುದು ಎಂಬು ಊಹಾಪೋಹಗಳ ಮಧ್ಯೆಯೇ ಕೇಂದ್ರ...

ಸೋನಿಯಾ ಗಾಂಧಿ ಕಾಂಗ್ರೆಸ್ ಅನ್ನು ಒಗ್ಗೂಡಿಸುವ ಅಂಶ: ವೆಂಕಯ್ಯ ನಾಯ್ಡು
ವೆಂಕಯ್ಯ ನಾಯ್ಡು
Published On :
ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಏರಿಸಬಹುದು ಎಂಬು ಊಹಾಪೋಹಗಳ ಮಧ್ಯೆಯೇ ಕೇಂದ್ರ ಸಚಿವ ಎಂ. ವೆಂಕಯ್ಯ ನಾಯ್ಡು ಅವರು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ಸಿನ ’ಒಗ್ಗೂಡಿಸುವ ಅಂಶ’ವಾಗಿದ್ದು, ಅವರಿಲ್ಲದೇ ಹೋಗಿದ್ದರೆ ಪಕ್ಷವು ಛಿದ್ರವಾಗುತ್ತಿತ್ತು ಎಂದು ಹೇಳಿದ್ದಾರೆ.
‘ನಾಯಕ(ತ್ವ) ವಿಚಾರ ಅವರ ಪಕ್ಷದ ಆಂತರಿಕ ವಿಚಾರ. ನಾನು ಇಷ್ಟನ್ನು ಮಾತ್ರವೇ ಹೇಳಬಲ್ಲೆ. ಸೋನಿಯಾಜಿ ಕಾರಣದಿಂದ ಕಾಂಗ್ರೆಸ್ ಒಗ್ಗಟ್ಟಿನಿಂದ ಇದೆ ಅಷ್ಟೆ. ಇಲ್ಲದೇ ಇದ್ದರೆ ಅದು ಛಿದ್ರವಾಗುತ್ತಿತ್ತು. ವಂಶಾಡಳಿತವನ್ನು ನಾನು ಒಪ್ಪುವುದಿಲ್ಲವಾದರೂ ಇದು ನನ್ನ ಅಭಿಪ್ರಾಯ’ ಎಂದು ನಾಯ್ಡು ನುಡಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ವಂಶಾಡಳಿತ ಅಸಹ್ಯ. ಆದರೆ ಕೆಲವು ಮಂದಿಗೆ ಅದರಲ್ಲೂ ನಿರ್ಧಿಷ್ಟವಾಗಿ ಕಾಂಗ್ರೆಸ್ ಮತ್ತು ಅದರ ಬೆಂಬಲಿಗರಿಗೆ ಅದು ಅತ್ಯಂತ ರುಚಿಕರ. ಆದರೆ ವಾಸ್ತವವನ್ನು ಅಂಗೀಕರಿಸಲೇಬೇಕು. ಸೋನಿಯಾ ಅವರು ಕಾಂಗ್ರೆಸ್ ಪಕ್ಷದಲ್ಲಿ ಒಗ್ಗೂಡಿಸುವ ಅಂಶ’ ಎಂದು ಸಂಸದೀಯ ವ್ಯವಹಾರಗಳ ಸಚಿವರು ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.