ಜಯಲಲಿತಾ ಗೆಲುವಿನ ಸಂಭ್ರಮ: 1 ರೂಗೆ ಪ್ರಯಾಣಿಕರ ಕರೆದೊಯ್ಯುವ ಆಟೋ ಚಾಲಕ

ತಮಿಳುನಾಡಿನಲ್ಲಿ ಜಯಲಲಿತಾ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದೆ. ಜಯಲಲಿತಾ ಅಭಿಮಾನಿಗಳು ನಾನಾ ರೀತಿಯಲ್ಲಿ ಸಂಭ್ರಮಿಸುತ್ತಿದ್ದಾರೆ....
ಜಯಲಲಿತಾ
ಜಯಲಲಿತಾ

ಕೊಯಮತ್ತೂರು: ತಮಿಳುನಾಡಿನಲ್ಲಿ ಜಯಲಲಿತಾ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದೆ. ಜಯಲಲಿತಾ ಅಭಿಮಾನಿಗಳು ನಾನಾ ರೀತಿಯಲ್ಲಿ ಸಂಭ್ರಮಿಸುತ್ತಿದ್ದಾರೆ.

61 ವರ್ಷದ ಆಟೋ ಚಾಲಕ ಜಯಲಲಿತಾ ಅಭಿಮಾನಿ ಆರ್. ಎಂ. ಮತಿವಣನ್ ಪ್ರಯಾಣಿಕರಿಂದ ಕೇವಲ 1ರೂ. ಬಾಡಿಗೆ ಪಡೆದು ವಿಭಿನ್ನ ರೀತಿಯಲ್ಲಿ ಅಮ್ಮನ ಗೆಲುವನ್ನು ಸಂಭ್ರಮಿಸಿದ್ದಾರೆ. ಒಂದು ದಿನದಲ್ಲಿ 102 ಪ್ರಯಾಣಿಕರನ್ನು ಕರೆದೊಯ್ಯುವ ಮೂಲಕ ಒಟ್ಟು 102ರೂ. ಸಂಪಾದಿಸಿದ್ದಾರೆ .

ನಾನು ತಿಂಡಿ, ಉಟವನ್ನು ಬಿಟ್ಟು ಬೆಳಗ್ಗೆ 6 ಗಂಟೆಯಿಂದ ಸಂಜೆ 6ರ ವರೆಗೆ ಪ್ರಯಾಣಿಕರು ಹೇಳಿದ ಸ್ಥಳಕ್ಕೆ 1.ರೂ ಟೋಕನ್ ಶುಲ್ಕ ಮಾತ್ರ ಪಡೆದು ಜನರ ಸೇವೆ ಮಾಡುವ ಮೂಲಕ ಅಮ್ಮನ ಗೆಲುವನ್ನು ಸಂಭ್ರಮಿಸಲು ತೀರ್ಮಾನಿಸಿದೆ’ ಎಂದು ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

1975ರಿಂದ ಪಕ್ಷದ ಕಾರ್ಯಕರ್ತರಾಗಿರುವ ಮತಿವಣನ್ 41 ವರ್ಷದಿಂದ ಕೊಯಮತ್ತೂರು ನಗರದಲ್ಲಿ ಅಟೋ ಓಡಿಸಿಕೊಂಡು ಜೀವನ ಮಾಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com