ಭಾರತಕ್ಕೆ ಬೇಕಾಗಿರುವ ಸಾಲದ ದೊರೆ ವಿಜಯ್ ಮಲ್ಯ ಮೋಜು, ಮಸ್ತಿಗಿಲ್ಲ ಭಂಗ

ಸಾಲಬಾಧೆಯಿಂದ ವಿದೇಶಕ್ಕೆ ಪರಾರಿಯಾಗಿರುವ ವಿಜಯ್ ಮಲ್ಯ ಅವರು ಇದೇ ಮೊದಲ ಬಾರಿಗೆ ಪುತ್ರ ಸಿದ್ಧಾರ್ಥನೊಂದಿಗೆ ವಿಡಿಯೋವೊಂದರಲ್ಲಿ ಬಹಿರಂಗವಾಗಿ...
ಸಿದ್ಧಾರ್ಥ ಮಲ್ಯ ಹಾಗೂ ವಿಜಯ್ ಮಲ್ಯ
ಸಿದ್ಧಾರ್ಥ ಮಲ್ಯ ಹಾಗೂ ವಿಜಯ್ ಮಲ್ಯ
ಲಂಡನ್: ಸಾಲಬಾಧೆಯಿಂದ ವಿದೇಶಕ್ಕೆ ಪರಾರಿಯಾಗಿರುವ ವಿಜಯ್ ಮಲ್ಯ ಅವರು ಇದೇ ಮೊದಲ ಬಾರಿಗೆ ಪುತ್ರ ಸಿದ್ಧಾರ್ಥನೊಂದಿಗೆ ವಿಡಿಯೋವೊಂದರಲ್ಲಿ ಬಹಿರಂಗವಾಗಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಮೋಜು, ಮಸ್ತಿಗೆ ಯಾವುದೇ ಭಂಗವಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.
ವಿಜಯ್ ಮಲ್ಯ ಅವರು ಲಂಡನ್ ನಲ್ಲಿ ಕುಳಿತು ಭಾನುವಾರ ಬೆಂಗಳೂರಿನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಡುವಿನ ಐಪಿಎಲ್ ಫೈನಲ್ ಪಂದ್ಯ ವೀಕ್ಷಿಸುತ್ತಾ, ಎಂಜೊಯ್ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
ನಾನು ನನ್ನ ತಂದೆಯೊಂದಿಗೆ ಐಪಿಎಲ್ ಪಂದ್ಯ ವೀಕ್ಷಿಸಿದೆ ಎಂದು ತಂದೆಯೊಂದಿಗಿನ ವಿಡಿಯೋ ತುಣಕೊಂದನ್ನು ಸಿದ್ಧಾರರ್ಥ ಮಲ್ಯ ಸಾಮಾಜಿಕ ತಾಣಗಳಿಗೆ ಅಪ್ ಲೋಡ್ ಮಾಡಿದ್ದಾರೆ.
17 ವಿವಿಧ ಬ್ಯಾಂಕುಗಳಲ್ಲಿ 9000 ಕೋಟಿ ಸಾಲ ಪಡೆದಿರುವ ವಿಜಯ್ ಮಲ್ಯ ಈಗ ವಿದೇಶದಲ್ಲಿ ನೆಲೆಸಿದ್ದಾರೆ. ಸಾಲಮರುಪಾವತಿ ಬಗ್ಗೆ ಮೂರು ಬಾರಿ ನೊಟೀಸ್ ಕಳುಹಿಸಿದರೂ ಪ್ರಯೋಜನವಾಗಿಲ್ಲ. ಈ ಹಿನ್ನಲೆಯಲ್ಲಿ ಅವರ ರಾಜತಾಂತ್ರಿಕ ಪಾಸ್ ಪೋರ್ಟ್ ಅನ್ನು ಸಹ ರದ್ದು ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com