ರಸ್ತೆ ನಿರ್ಮಾಣದಂತಹ ಯೋಜನೆಗಳಿಗೆ ಸಂಬಂಧಿಸಿದಂತೆ ಅಂದಾಜು ವೆಚ್ಚ ತಯಾರು ಮಾಡುವಾಗ ಕಮಿಷನ್ ರೂಪದಲ್ಲಿ ಲಂಚ ಪಡೆದಿರುವುದಾಗಿ ಹೇಳಿರುವ ಇಂಜಿನಿಯರ್, ಲಂಚವನ್ನು ನೇರವಾಗಿ ಕೇಳಬೇಕಿಲ್ಲ, ಸಾರ್ವಜನಿಕ ಟೆಂಡರ್ ನಿಂದ ಹಿಡಿದು ಯೋಜನೆ ಮುಕ್ತಾಯಗೊಳ್ಳುವವರೆಗೆ ಯೋಜನೆಯ ಪ್ರತಿ ಹಂತದಲ್ಲೂ ಅಕ್ರಮ ಹಣ ಕೈಗಳನ್ನು ಬದಲಾಯಿಸುತ್ತವೆ. ಸಚಿವರಿಂದ ಹಿಡಿಡು ಕಡೆಯ ಶ್ರೇಣಿಯ ನೌಕರನವರೆಗೆ ಬಹುತೇಕ ಎಲ್ಲರೂ ಈ ಕಮಿಷನ್ ಗಳ ಫಲಾನುಭವಿಗಳೇ. ಬೇರೆಯವರು ಪಡೆಯುವ ಲಂಚಕ್ಕೆ ಹೋಲಿಸಿದರೆ ನನ್ನದೇನೂ ಇಲ್ಲ ಎಂದು ನಿಷೇಧಗೊಂಡ ನೋಟುಗಳ ರಾಶಿಯನ್ನು ಹೊಂದಿರುವ ಇಂಜಿನಿಯರ್ ಕಪ್ಪುಹಣದ ವ್ಯಾಪ್ತಿಯನ್ನು ವಿವರಿಸಿದ್ದಾರೆ. ಕೇಂದ್ರ ಸರ್ಕಾರದ ಘೋಷಣೆಯ ಹೊರತಾಗಿಯೂ ತನ್ನ ಬಹುತೇಕ ’ಉಳಿತಾಯ’ವನ್ನು ಸುರಕ್ಷಿತವಾಗಿರುಸುವಲ್ಲಿ ಯಶಸ್ವಿಯಾಗಿದ್ದಾರಂತೆ ಈ ಇಂಜಿನಿಯರ್, ಆದರೆ ಅದು ಹೇಗೆ ಎನ್ನುವುದನ್ನು ಮಾತ್ರ ವಿವರಿಸಿಲ್ಲ.