ನವದೆಹಲಿ: ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಿ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದ ಒಂದು ದಿನದ ನಂತರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಟ್ವಿಟ್ಟರ್ ಖಾತೆ ಗುರುವಾರ ಮರುಕಳಿಸಿದ್ದು "ನನ್ನೆಲ್ಲ ದ್ವೇಷಿಗಳಿಗೆ ಪ್ರೀತಿಯನ್ನು ಕಳುಹಿಸುತ್ತೇನೆ ಮತ್ತು ಅವರೆಲ್ಲರೂ ಒಳ್ಳೆಯವರು" ಎಂದು ಬರೆದಿದ್ದಾರೆ.
"ನನ್ನನ್ನು ದ್ವೇಷಿಸುವ ಎಲ್ಲರಿಗು: ನಿಮ್ಮೆಲ್ಲರನ್ನು ಪ್ರೀತಿಸುತ್ತೇನೆ. ನೀವೆಲ್ಲರೂ ಸುಂದರ ಜನ. ನಿಮ್ಮ ದ್ವೇಷ ಅದನ್ನು ಮುಚ್ಚಿ ಹಾಕಿದೆ ಅಷ್ಟೇ" ಎಂದು ರಾಹುಲ್ ಗಾಂಧಿ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆ @OfficeOfRg ಮರುಕಳಿಸಿದ ಮೇಲೆ ಟ್ವೀಟ್ ಮಾಡಿದ್ದಾರೆ.
To every one of you haters out there. I love all of you. You're beautiful. Your hatred just doesn't let you see it yet
ಗುರುವಾರ ಬೆಳೆಗ್ಗೆ ಕಾಂಗ್ರೆಸ್ ಪಕ್ಷದ ಟ್ವಿಟ್ಟರ್ ಖಾತೆ ಕೂಡ ಹ್ಯಾಕ್ ಆಗಿತ್ತು ಅದು ಕೂಡ ಈಗ ಮರುಕಳಿಸಿದೆ.
"ಎಲ್ಲರಿಗು ನಮಸ್ಕಾರ! ನಾವು ಹಿಂದಿರುಗಿದ್ದೇವೆ. ಬೆಳಗ್ಗೆ ಬರೆದಿದ್ದ ಟ್ವೀಟ್ ಗಳಲ್ಲಿ ಅರಿವು ಇರಲಿಲ್ಲ. ಇರಲಿ, ಮೋದಿ ಅವರೇ ಈಗ ಮತ್ತೆ ಜನರ ಪ್ರಶ್ನೆಗಳಿಗೆ ಹಿಂದಿರುಗೋಣ, ಉತ್ತರ ಕೊಡುವಿರೆ?" ಎಂದು ಕಾಂಗ್ರೆಸ್ ಪಕ್ಷದ ಟ್ವಿಟ್ಟರ್ ಖಾತೆ @INCIncdia ಮರುಕಳಿಸಿದ ಮೇಲೆ ಟ್ವೀಟ್ ಮಾಡಲಾಗಿದೆ.